ನ್ಯೂಸ್

ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ; ಗೌರಿ ಖಾನ್ ವಿರುದ್ಧ FIR ದಾಖಲು

ಮುಂಬೈ : ಬಾಲಿವುಡ್‌ ನಟ ಶಾರುಖ್ ಖಾನ್‌ ಪತ್ನಿ ಗೌರಿ ಖಾನ್ ವಿರುದ್ಧ ಪ್ರಾಪರ್ಟಿ ವಿಚಾರವಾಗಿ ಲಕ್ನೋದ ಸುಶಾಂತ್ ಗೊಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂಬೈನ ಕಿರತ್ ಜಸ್ವಂತ್ ಅವರು ದೂರು ದಾಖಲಿಸಿದ್ದಾರೆ. ಫ್ಲ್ಯಾಟ್‌ನ ಪೂರ್ತಿ ಹಣವನ್ನು ನೀಡಿದ್ದರೂ ಕೂಡ ನನಗೆ ಮನೆ ನೀಡಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ. ಲಕ್ನೋದ ತುಲಸಿಯಾನಿ ಗೊಲ್ಫ್ ವ್ಯೂ ಪ್ರಾಜೆಕ್ಟ್ ಅಡಿಯಲ್ಲಿ ಈ ಫ್ಲ್ಯಾಟ್ ಇದೆ. ಗೌರಿ ಖಾನ್ ಅವರು ಈ ಪ್ರಾಜೆಕ್ಟ್​​ಗೆ ರಾಯಭಾರಿಯಾಗಿರುವುದಕ್ಕೆ ನಾನು ಈ ಫ್ಲ್ಯಾಟ್‌ ಖರೀದಿ ಮಾಡುವ ಮನಸ್ಸು ಮಾಡಿದ್ದೆ. 86 ಲಕ್ಷ ರೂಪಾಯಿ ಹಣ ನೀಡಿದ ನಂತರದಲ್ಲಿ ಕೂಡ ಖರೀದಿದಾರರಿಗೆ ಫ್ಲ್ಯಾಟ್‌ ನೀಡಿಲ್ಲ ಎಂದು ಆರೋಪ ಮಾಡಲಾಗಿದೆ.

ಎಫ್‌ಐಆರ್‌ನಲ್ಲಿ ದಿ ಮ್ಯಾನೇಜಿಂಗ್ ಡೈರೆಕ್ಟರ ಆಫ್ ತುಲಸಿಯಾನಿ ಕನ್‌ಸ್ಟ್ರಕ್ಷನ್ ಮತ್ತು ಡೆವಲಪ್‌ಮೆಂಟ್ ಲಿಮಿಟೆಡ್‌ನ ಅನಿಲ್ ಕುಮಾರ್ ತುಲಸಿಯಾನಿ, ಮಹೇಶ್‌ ತುಲಸಿಯಾನಿ, ಹಾಗೂ ರಾಯಭಾಯಿ ಗೌರಿ ಖಾನ್ ಅವರ ಹೆಸರು ದಾಖಲಾಗಿದೆ.

ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಗೌರಿ ಖಾನ್ ಅವರು ಉತ್ತಮ ಡಿಸೈನರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಅನೇಕ ಬಿಗ್ ಸ್ಟಾರ್‌ಗಳ ಮನೆಯನ್ನು ಗೌರಿ ಖಾನ್ ಅವರೇ ಡಿಸೈನ್ ಮಾಡಿದ್ದಾರೆ.