ಪತ್ನಿಯ ಕತ್ತು ಹಿಸುಕಿದ ಪತಿ; ಕಪ್ಪಗಿದ್ದೀಯಾ, ಎಷ್ಟೇ ಪೌಡರ್ ಹಾಕಿದ್ರೂ ವೈಟ್ ಆಗೋದಿಲ್ಲ!

Kalaburagi
Published on

ಕಲಬುರಗಿ: ಸಣ್ಣ-ಪುಟ್ಟ ವಿಚಾರಗಳು ಇತ್ತೀಚೆಗೆ ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತವೆ. ಇಲ್ಲೊಂದು ಜೋಡಿ ಮೈ ಬಣ್ಣದ ವಿಚಾರವಾಗಿ ಜಗಳ ಮಾಡಿಕೊಂಡು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೆಲ್ಲೂರ್ ಗ್ರಾಮದಲ್ಲಿ ನಡೆದಿದೆ.

ಫರ್ಜಾನ ಬೇಗಂ (28) ಕೊಲೆಯಾದ ಮಹಿಳೆ. ಖಾಜಾ ಪಟೇಲ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಫರ್ಜಾನ ಬೇಗಂ, ಖಾಜಾ ಪಟೇಲ್ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ನೀನು ಕಪ್ಪಗಿದ್ದೀಯಾ, ಎಷ್ಟೇ ಪೌಡರ್ ಹಾಕಿದರೂ ಕೂಡ ವೈಟ್ ಆಗೋದಿಲ್ಲ ಎಂದು ಹೆಂಡತಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು.

ಫರ್ಜಾನ ಬೇಗಂಗೆ ವರದಕ್ಷಿಣೆ ತರುವಂತೆ ಖಾಜಾ ಪಟೇಲ್ ಹಾಗೂ ಆತನ ಕುಟುಂಬಸ್ಥರು ಮದುವೆಯಾದ ದಿನದಿಂದ ನಿತ್ಯ ಕಿರುಕುಳ ಕೊಡುತ್ತಿದ್ದರು. ವರದಕ್ಷಿಣೆ ತರದೆ ಇರೋದಕ್ಕೆ ಕತ್ತು ಹಿಸುಕಿ ಹೆಂಡತಿಯನ್ನ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಎಸ್ಕೇಪ್ ಆಗಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net