ನ್ಯೂಸ್

ಅವರೇಳಿದ್ದನ್ನು ಮಾಡಲು ನನಗೆ ತುಂಬ ಕಷ್ಟವಾಯ್ತು! ಕಣ್ಣಂಚಲಿ ನೀರು ಬಿಟ್ಟರೇ ಬೇರೇನೂ ಉಳಿದಿರಲಿಲ್ಲ

ಮುಂಬೈ: ಇತ್ತೀಚೆಗಷ್ಟೇ ತಮ್ಮ ಸಿನಿಪಯಣವನ್ನು ಮೆಲುಕು ಹಾಕಿದ ಬಾಲಿವುಡ್​ನ ಹಿರಿಯ ನಟಿ ಶಬಾನಾ ಅಜ್ಮಿ, 1976ರಲ್ಲಿ ನಟ ಶಶಿ ಕಪೂರ್​ ಅವರೊಂದಿಗೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ನಡೆದ ಒಂದು ಮರೆಯಲಾಗದ ಘಟನೆ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸುಮಾರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅಜ್ಮಿ, ಆ ಸಮಯದಲ್ಲಿ ಶಶಿ ಅಂದ ಮಾತು ತನ್ನ ಬಾಳನ್ನು ಹೇಗೆ ಬದಲಾಯಿಸಿತು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

1976ರಲ್ಲಿ ತೆರೆಕಂಡ 'ಫಕೀರಾ' ಚಿತ್ರದ ಚಿತ್ರೀಕಣದ ವೇಳೆ ಶಬಾನಾ ಅವರು ಕೆಲವು ಹಸಿಬಿಸಿ ದೃಶ್ಯಗಳಲ್ಲಿ ನಟಿಸಬೇಕು ಎಂದು ನಿರ್ದೇಶಕರು ಹೇಳಿದ್ದರಂತೆ. ಈ ಘಟನೆಯನ್ನು ನೆನಪಿಸಿಕೊಂಡ ಅಜ್ಮಿ, "ಆಗ ತುಂಬ ಕಷ್ಟದ ಸಮಯ ನನಗೆ. ವಯಸ್ಸಿನಲ್ಲಿ ಎಲ್ಲರಿಗಿಂತ ಬಹಳ ಕಿರಿಯವಳಾಗಿದ್ದೆ. ಡೈರೆಕ್ಟರ್​ ಇಂತಹ ಸೀನ್​ಗಳಲ್ಲಿ ನೀವು ನಟಿಸಬೇಕು ಎಂದಾಕ್ಷಣ ದುಃಖ ಆವರಿಸಿತು. ಇದನ್ನು ನಾನು ಮಾಡಲ್ಲ, ಮಾಡಲು ನನ್ನಿಂದ ಆಗಲ್ಲ ಎಂದು ನನ್ನ ಹೇರ್​ ಸ್ಟೈಲಿಸ್ಟ್​ ಬಳಿ ಕಣ್ಣೀರಿಟ್ಟಿದ್ದೆ. ಆಗ ನಡೆದಿದ್ದೆ ಆಶ್ವರ್ಯ" ಎಂದರು.

"ಮೇಕಪ್ ರೂಮ್​ನಲ್ಲಿ ಕಣ್ಣೀರಿಡುತ್ತ ಕುಳಿತ್ತಿದ್ದ ನನ್ನನ್ನು ಹುಡುಕುತ್ತ ಬಂದ ಶಶಿ ಕಪೂರ್​, ನನಗೆ ಸಮಾಧಾನ ಮಾತುಗಳನ್ನು ಹೇಳಿ, ಕಣ್ಣೀರು ಒರೆಸುವ ಕೆಲಸ ಮಾಡುತ್ತಾರೆ ಎಂದೇ ನಾನು ಭಾವಿಸಿದ್ದೆ. ಆದರೆ, ಅವರು ಏಕಾಏಕಿ 'ಸ್ಟುಪಿಡ್'​ ಎಂದು ಬೈದ್ದಿದ್ದಲ್ಲದೇ ಒಂದು ಕಿವಿಮಾತನ್ನು ಸಹ ಹೇಳಿದರು. ಅಂದು ಆ ಮಾತು ಇಂದು ನನ್ನನ್ನು ಒಬ್ಬ ಪರಿಪೂರ್ಣ ನಟಿಯಾಗಿ ಮಾಡಿತು" ಎಂದು ಹೇಳಿದ್ದಾರೆ.

"ಚಿತ್ರೀಕರಣ ನಡೆಯುತ್ತಿದ್ದ ಸೆಟ್​ನ ಬಿಟ್ಟುಹೋದ ನನಗೆ ಕಣ್ಣೀರು ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಆಗ ಶಶಿ ಕಪೂರ್ ಅವರು, 'ನಿನ್ನ ತಾಯಿಗೆ ನೀನು ನಟಿಯಾಗಬೇಕೆಂದು ಹೇಳಿದಾಗ ಇದೆಲ್ಲಾ ನಿನಗೆ ನೆನಪಿಗೆ ಬರಲಿಲ್ವಾ? ನಟಿ ಅಂದಮೇಲೆ ಪಾತ್ರ ಮುಖ್ಯ. ಅಯ್ಯೋ ಮೂರ್ಖ ಹುಡುಗಿ' ಎಂದಿದ್ದರು. ಆಗ ನನಗೆ ಅರಿವಾಯಿತು. ತಕ್ಷಣವೇ ಚಿತ್ರೀಕರಣದ ಸೆಟ್​ಗೆ ವಾಪಾಸ್​ ಆಗಿ, ನಿರ್ದೇಶಕರು ಹೇಳಿದ ಸೀನ್​ನ ಮಾಡಿ ಮುಗಿಸಿದೆ" ಎಂದಿದ್ದಾರೆ,(ಏಜೆನ್ಸೀಸ್).