ನ್ಯೂಸ್

ವಾಹಿನಿ ಮುಂದೆ ಕುಳಿತು ಪಾಠ ಆಲಿಸಿದ ಮಕ್ಕಳು

ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಸೇತುಬಂಧ ಕಾರ್ಯಕ್ರಮಕ್ಕೆ ಸೋಮವಾರ ಚಂದನ ವಾಹಿನಿಯಲ್ಲಿ ಚಾಲನೆ ಸಿಕ್ಕಿದೆ. ಶಾಲೆಗೆ ಹಾಜರಾಗುವ ರೀತಿಯಲ್ಲೇ ವಾಹಿನಿ ಮುಂದೆ ಕುಳಿತು ಪಾಠ ಆಲಿಸಿದರು.

ಹಲವೆಡೆ ಮಕ್ಕಳೊಂದಿಗೆ ಶಿಕ್ಷಕರು ಕುಳಿತು ಟಿವಿಯಲ್ಲಿ ಬರುತ್ತಿದ್ದ ಪಾಠ ಆಲಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ನಮಗೆ ಒಂದು ರೀತಿಯ ಹೊಸ ಅನುಭವ ನೀಡಿದೆ ಎಂದು ಪ್ರೌಢಶಾಲಾ ಶಿಕ್ಷಕರೊಬ್ಬರು ಹೇಳಿದರು.

8ರಿಂದ 10ನೇ ತರಗತಿಗಳ ಕಲಿಕೆಯ ನಿರಂತರತೆಗಾಗಿ ಸೇತುಬಂಧ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಷ್ಠಾನ ಮಾಡಿದೆ. ಮೊದಲ ದಿನದ ತರಗತಿಗಳು ಸೋಮವಾರ ನಡೆದಿವೆ. ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯ ಅನುಭವ ಸಿಗದಿದ್ದರೂ, ಕಲಿಕೆ ಹಾಗೂ ಬೋಧನಾ ವಿಧಾನದ ವಿಶಿಷ್ಟ ಅನುಭವ ನೀಡುತ್ತಿದ್ದೇವೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವೇಳಾಪಟ್ಟಿಗಾಗಿ ಇಲಾಖೆ ವೆಬ್​ಸೈಟ್ http://desert.kar.nic.in/ ನೋಡಬಹುದು.