ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸೋಮವಾರ ಭಾರತದ ಷೇರು ಸೂಚ್ಯಂಕ ಇಳಿಕೆ ಕಂಡಿದೆ. ಸೆನ್ಸೆಕ್ಸ್ 670.93 ಪಾಯಿಂಟ್ ಕುಸಿದು 71,355.22ಕ್ಕೆ ಸ್ಥಿರವಾಯಿತು. ದಿನದ ಅವಧಿಯಲ್ಲಿ ಇದು 725.11 ಪಾಯಿಂಟ್ ಕುಸಿದು 71,301.04ಕ್ಕೆ ತಲುಪಿತ್ತು.
ನಿಫ್ಟಿ 197.80 ಪಾಯಿಂಟ್ ಕುಸಿದು 21,513ಕ್ಕೆ ತಲುಪಿದೆ. ಮೊದಲ ತೆಮಾಸಿಕದಲ್ಲಿ ಕಂಪನಿಗಳ ಆರ್ಥಿಕ ವರದಿ ಮೇಲಿನ ನಿರೀಕ್ಷೆ, ಬಡ್ಡಿದರಗಳಲ್ಲಿ ಕಡಿತದ ನಿರೀಕ್ಷೆಯ ನಡುವೆ ಜಾಗತಿಕ ಷೇರುಗಳಲ್ಲೂ ಸೋಮವಾರ ಇಳಿಕೆ ಕಂಡುಬಂತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಟಿಸಿ, ನೆಸ್ಲೆ, ಏಷ್ಯನ್ ಪೇಂಟ್, ಟೆಕ್ ಮಹೀಂದ್ರಾ, ಮಹೀಂದ್ರಾ ಮತ್ತು ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಹಿಂದುಸ್ತಾನ್ ಯೂನಿಲಿವರ್ ಇಳಿಕೆ ಕಂಡವು. ಎಚ್ಸಿಎಲ್ ಟೆಕ್ನಾಲಜೀಸ್, ಪವರ್ ಗ್ರಿಡ್, ಸನ್ ಫಾರ್ಮಾ, ಎನ್ಟಿಪಿಸಿ, ಬಜಾಜ್ ಫೈನಾನ್ಸ್ ಮತ್ತು ಟೈಟಾನ್ ಷೇರುಗಳು ಲಾಭ ಗಳಿಸಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 1.21 ರಷ್ಟು ಕುಸಿದು, 77.81 ಡಾಲರ್ ತಲುಪಿದೆ.
ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 250 ರೂ. ಇಳಿಕೆ ಕಂಡು 63,200 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಪ್ರತಿ ಕಿಲೋಗ್ರಾಂಗೆ 400 ರೂ. ಕುಸಿದು 76,300 ರೂ. ತಲುಪಿದೆ.