ನ್ಯೂಸ್

ಅವಕಾಶ ಕೊಡಿ ಎಂದರೆ ಬಟ್ಟೆ ಬಿಚ್ಚು ಅಂದ್ರು: ಅಳಲು ತೋಡಿಕೊಂಡ ನಟಿ ಆಮನಿ

ಮುಂಬೈ: ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಆಮಿನಿ ಈ ಹಿಂದೆ ಸಿನಿಮಾಗಳಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಹೋದಾಗ ಎದುರಿಸಿದ ಕೆಟ್ಟ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಆಮಿನಿ ಈ ಹಿಂದೆ ಅವಕಾಶಗಳನ್ನು ಹುಡುಕಿಕೊಂಡು ಹೋದಾಗ ಹೊಸ ಚಿತ್ರತಂಡದವರು ಹೇಗೆ ವರ್ತಿಸುತ್ತಾರೆ ಎಂದು ರಿವೀಲ್ ಮಾಡಿದ್ದಾರೆ.

ಆಮಿನಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿ, ಸಿನಿಮಾದಲ್ಲಿ ಅವಕಾಶ ಇದೆ ಎಂದು ಮ್ಯಾನೇಜರ್ ಕರೆ ಮಾಡಿದಾಗ ನಾವು ಹೋಗುತ್ತೇವೆ. ಟೂ ಪೀಸ್ ಹಾಕಬೇಕು. ತೊಡೆ ಮೇಲೆ ಸ್ಟ್ರೆಚ್‌ ಮಾರ್ಕ್‌ಗಳು ಇರುತ್ತದೆ ಅದು ನಿಮಗೂ ಇದ್ಯಾ...ತೋರಿಸಿ ಎಂದು ಕೇಳುತ್ತಾರೆ.  ನನಗೆ ಇಲ್ಲ ಅಂದ್ರೆ ಒಮ್ಮೆ ತೋರಿಸಿ ಎನ್ನುತ್ತಾರೆ. ತಾಯಿ ಅಥವಾ ಸಹೋದರನ ಜೊತೆ ಸಿನಿಮಾ ಆಡಿಷನ್ ಅಥವಾ ಅವಕಾಶ ಕೇಳಲು ಹೋಗುತ್ತೀವಿ ಅವರ ಮುಂದೆ ಈ ರೀತಿ ಮಾತನಾಡಿದರೆ ನಾವು ಹೇಗೆ ವರ್ತಿಸಬೇಕು? ಕೆಟ್ಟ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವ ನೆಪದಲ್ಲಿ ಆಫೀಸ್‌ ತೆಗೆಯುತ್ತಾರೆ. ಒಳ್ಳೆ ಸಂಸ್ಥೆಗಳಲ್ಲಿ ಈ ರೀತಿ ಪ್ರಶ್ನೆ ಮಾಡಲ್ಲ ಆಡಿಷನ್‌ ಮಾಡಲ್ಲ. ಸನ್ನಿವೇಶ ಕೊಟ್ಟು ನಟಿಸಿ ತೋರಿಸಬೇಕು. ಅದು ಬಿಟ್ಟು ಸ್ಟ್ರೆಚ್‌ ಮಾರ್ಕ್‌ ತೋರಿಸು, ಕಪ್ಪು ಮಚ್ಚೆ ಇದ್ಯಾ ಅಂತಾರೆ. ಮೊನ್ನೆ ಬಬ್ಬ ನಟಿಯನ್ನು ಹೀಗೆ ಆಯ್ಕೆ ಮಾಡಿಕೊಂಡು ಬಟ್ಟೆ ಬಿಚ್ಚಿ ತೋರ್ಸಿ ಅಂದಿದ್ದಾರೆ. ಚಿತ್ರಕಥೆ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ ನಾನು ಟೂ ಪೀಸ್ ಹಾಕುತ್ತೀನಿ...ಅದು ಬಿಟ್ಟು ಆ ಮಾರ್ಕ್‌ ತೋರಿಸು ಈ ಮಚ್ಚೆ ತೋರಿಸು ಅಂದಾಗ ಎದ್ದು ಬಂದಿರುವ ಸಂದರ್ಭವೂ ಇದೆ ಎಂದಿದ್ದಾರೆ ಅಮಿನಿ.

ಪತಿಯಿಂದ ಬೇರ್ಪಡುವ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು, ಆದರೆ ಇಲ್ಲಿಯವರೆಗೆ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಇನ್ನೂ ವಿಚ್ಛೇದನವನ್ನು ತೆಗೆದುಕೊಂಡಿಲ್ಲ, ಆದರೆ ಇನ್ನು ಮುಂದೆ ತನ್ನ ಪತಿಯೊಂದಿಗೆ ವಾಸಿಸುತ್ತಿಲ್ಲ ಎಂದು ಉತ್ತರಿಸಿದಳು.

ಪ್ರತಿಯೊಬ್ಬರು ಕಷ್ಟ ಪಟ್ಟು ಇಲ್ಲಿಗೆ ಬರುತ್ತಾರೆ. ಯಾವುದು ಸರಿ, ಯಾವುದು ತಪ್ಪು ಎಂದು ನಾವು ಆಯ್ಕೆ ಮಾಡಿಕೊಳ್ಳಬೇಕು. ಯಾರಿಗೂ ಅಷ್ಟು ಸುಲಭವಾಗಿ ಅವಕಾಶ ಮತ್ತು ಯಶಸ್ಸು ಸಿಗುವುದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಒಳ್ಳೆಯದು ಕಟ್ಟದ್ದು ಇದ್ದೇ ಇರುತ್ತದೆ. ತಮಿಳು ಚಿತ್ರರಂಗದಲ್ಲಿ ನನಗೂ ಕೆಟ್ಟ ಅನುಭವ ಆಗಿದೆ ಎಂದಿದ್ದಾರೆ.