ನ್ಯೂಸ್

ವಾಹನದಲ್ಲಿ ಸಿಕ್ತು ಕೋಟಿಗಟ್ಟಲೆ ಹಣ; ದಾಖಲೆ ಇಲ್ಲದ 5 ಕೋಟಿ ರೂ. ಜಪ್ತಿ

ಬಾಗಲಕೋಟೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಣ ಹಂಚಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಮತ್ತೊಂದು ಕಡೆ ದಾಖಲೆರಹಿತ ಕೋಟಿಗಟ್ಟಲೆ ಮೊತ್ತ ಸಿಕ್ಕಿದೆ. ಅದರಲ್ಲೂ ವಾಹನವೊಂದರಲ್ಲೇ ಕಂತೆ ಕಂತೆ ನೋಟುಗಳು ಸಿಕ್ಕಿದ್ದು, 5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.

ಮುಧೋಳ ಚುನಾವಣಾಧಿಕಾರಿಗಳು, ಫ್ಲೈಯಿಂಗ್​ ಸ್ಕ್ವಾಡ್​ ಹಾಗೂ ಲೋಕಾಪುರ ಪೊಲೀಸರು ಜತೆಯಾಗಿ ಲೋಕಾಪುರ ಪಟ್ಟಣ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್​ಪೋಸ್ಟ್​​ನಲ್ಲಿ ನಿನ್ನೆ ರಾತ್ರಿ ವಾಹನ ತಪಾಸಣೆ ವೇಳೆ ಈ ಅಪಾರ ಪ್ರಮಾಣದ ಹಣ ಸಿಕ್ಕಿದೆ.

ಬೊಲೆರೊ ವಾಹನದಲ್ಲಿ ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಈ ಹಣ ಸಾಗಿಸಲಾಗುತ್ತಿದ್ದು, ಇದು ಯೂನಿಯನ್ ಬ್ಯಾಂಕ್​ಗೆ ಸೇರಿದ ಹಣ, ಹುಬ್ಬಳ್ಳಿ ಶಾಖೆಯಿಂದ ಮುಧೋಳ ಶಾಖೆಗೆ ಒಯ್ಯಲಾಗುತ್ತಿದೆ ಎನ್ನಲಾಗಿತ್ತು. ಆದರೆ ಸೂಕ್ತ ದಾಖಲೆ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಹಣ ಜಪ್ತಿ ಮಾಡಿಕೊಂಡು, ವಾಹನದಲ್ಲಿದ್ದ ಐವರನ್ನು ವಶಕ್ಕೆ ಪಡೆದು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.