ನವದೆಹಲಿ: ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್‌ನ ತಂಡವು ಮಂಗಳವಾರ ಗ್ರೇಟರ್ ನೋಯ್ಡಾದಲ್ಲಿ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರನ್ನು ಭೇಟಿ ಮಾಡಿದ್ದು, ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಡೆದ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಆಧರಿಸಿದ ಮುಂಬರುವ ಚಿತ್ರ 'ಎ ಟೈಲರ್ ಮರ್ಡರ್ ಸ್ಟೋರಿ'ಗಾಗಿ ಆಡಿಷನ್ ನಡೆಸಿದೆ.
ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಐಎಸ್ಐ ಏಜೆಂಟ್ ಎಂದು ಶಂಕಿಸಲಾದ ಸೀಮಾ ಹೈದರ್, ಈ ಚಿತ್ರದಲ್ಲಿ RAW ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 6 ಲಕ್ಷ ರೂ.ವೇತನದ ಉದ್ಯೋಗ, ಸಿನಿಮಾದಲ್ಲಿ ಆಫರ್… ಭಾರತದಲ್ಲಿ ಮಿಂಚುತ್ತಿರುವ ಪಾಕ್ ಮಹಿಳೆ ಸೀಮಾ ಹೈದರ್
ಸಚಿನ್ಗಾಗಿ ಪಾಕಿಸ್ತಾನದಲ್ಲಿನ ತಮ್ಮ ಕುಟುಂಬವನ್ನು ತೊರೆದಿರುವ ಸೀಮಾ ಹೈದರ್, ಚಿತ್ರದ ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಅವರನ್ನು ಸಹ ಭೇಟಿಯಾದರು. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಹೊಸ ಮನೆಗೆ ತೆರಳಿದ ನಂತರ ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರು ಎದುರಿಸಿದ ತೊಂದರೆಗಳನ್ನು ವೀಡಿಯೊ ತೋರಿಸಿದ ಕೆಲವು ದಿನಗಳ ನಂತರ ಈ ಸುದ್ದಿ ವರದಿಯಾಗಿದೆ.
ಈ ಹಿಂದೆ ಅವರು, ದಿನನಿತ್ಯದ ವಸ್ತುಗಳಿಗಾಗಿ, ಆಹಾರ ಸಾಮಗ್ರಿಗಳಿಗಾಗಿ ಹೆಣಗಾಡುತ್ತಿದ್ದಾರೆ ಎಂದು ವಿಡಿಯೋ ಮಾಡಿದ್ದರು. ಇದು ಅನೇಕರ ಗಮನವನ್ನು ಸೆಳೆದಿತ್ತು. (ಏಜೆನ್ಸೀಸ್)