ಲಖನೌ: ಗಡಿತಾಚೆಗಿನ ಪ್ರೇಮಕಥೆಗೆ ಹೆಸರುವಾಸಿಯಾಗಿರುವ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಕಳೆದ ಕೆಲವು ತಿಂಗಳುಗಳಿಂದ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದು, ದಂಪತಿಗಳು ನಿರಂತರವಾಗಿ ವೈರಲ್ ಆಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸೀಮಾ ಕುರಿತಾಗಿ ಗಂಭೀರ ಆರೋಪ ಮಾಡಿದ್ದ ಆಕೆಯ ಮಾಜಿ ಪತಿ ಗುಲಾಮ್ ಹೈದರ್ ಇದೀಗ ತನ್ನ ಮಾಜಿ ಪತ್ನಿ ಕುರಿತಾಗಿ ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗುಲಾಮ್ ಹೈದರ್ ಪರ ವಕೀಲ ಮೊಮಿಮ್ ಮಲಿಕ್, ಸೀಮಾ ಹೈದರ್ ಹಾಗೂ ಆಕೆಯ ಕುಟುಂಬಸ್ಥರು ಪಾಕಿಸ್ತಾನ ಸೇನೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದು, ಆಗಿಂದಾಗೆ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಬಗ್ಗೆ ನಾವು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡತ್ತೇವೆ ಮತ್ತು ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನಮ್ಮ ಬಳಿ ಇವೆ ಎಂದು ಹೇಳಿದ್ದಾರೆ.
ಸೀಮಾ ತನ್ನ ಪೋನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತಿದ್ದಳು. ಟಿಕ್ಟಾಕ್ ಬ್ಯಾನ್ ಆದರೂ ಸಹ ಆಕೆ ಅದನ್ನು ಬಳಸುತ್ತಿದ್ದಳು. ಸೀಮಾಗೆ ಪಬ್ಜಿ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ ಆಕೆ ಕಂಪ್ಯೂಟರ್ ಬಳಸುವುದರಲ್ಲಿ ಪರಿಣಿತಿ ಹೊಂದಿದ್ದಳು. ಜೈಲು ಶಿಕ್ಷೆಯಾಗುವ ಭಯದಿಂದ ಆಕೆ ತನ್ನ ಮಕ್ಕಳ ಸಮೇತ ಭಾರತಕ್ಕೆ ಓಡಿ ಹೋಗಿದ್ದಾಳೆ. ಭಾರತದ ಗಡಿಯಲ್ಲಿ ಸಿಕ್ಕಿಬಿದ್ದಾಗ ಆಕೆ ತನ್ನ ಮಗಳ ಕೈಯಲ್ಲಿ ಬೇಕಂತಲೇ ವಾಂತಿ ಮಾಡಿಸಿ ವಿಚಾರಣೆಯಿಂದ ಪಾರಾಗಿದ್ದಾಳೆ.
ಸೀಮಾ ತನ್ನ ಪತಿಯನ್ನು ತೊರೆಯುವ ಮೊದಲು ಭಾರತಕ್ಕೆ ಎರಡು ಬಾರಿ ಭೇಟಿ ಕೊಟ್ಟಿದ್ದಳು. ನಮ್ಮ ಬಳಿ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಧಾರಗಳು ಹಾಗೂ ಆಡಿಯೋ ಇದ್ದು ನ್ಯಾಯಾಲಯದಲ್ಲಿ ಇದನ್ನು ಸಲ್ಲಿಸುತ್ತೇವೆ ಎಂದು ಸೀಮಾ ಹೈದರ್ ಮಾಜಿ ಪತಿ ಗುಲಾಮ್ ಪರ ವಕೀಲ ಮೊಮಿಮ್ ಮಲಿಕ್ ಆರೋಪಿಸಿದ್ದಾರೆ.