More

    ಚೆನ್ನೈ-ಆರ್​ಸಿಬಿ ನಡುವಿನ ಪಂದ್ಯಕ್ಕೆ ಐವರು ಆಟಗಾರರು ಅಲಭ್ಯ; ಚಿಂತೆಯಲ್ಲಿ ಫ್ರಾಂಚೈಸಿ

    ಬೆಂಗಳೂರು: ಹಾಲಿ ಐಪಿಎಲ್​ ಆವೃತ್ತಿಯಲ್ಲಿ ಸತತ ಸೋಲುಗಳ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮೇ 18ರಂದು ಚೆನ್ನೈ ಸೂಪರ್ಕಿಂಗ್ಸ್​ ವಿರುದ್ಧ ತನ್ನ ಕೊನೆಯ ಲೀಗ್​ ಪಂದ್ಯವನ್ನು ಆಡಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದ್ದು, ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿವೆ.

    ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿ ಕಮ್​ಬ್ಯಾಕ್​​ ಮಾಡಿರುವ ಆರ್​ಸಿಬಿ ತಂಡವು ಸಿಎಸ್​ಕೆಯನ್ನು ಮಣಿಸಿ ಪ್ಲೇಆಫ್​ಗೇರುವ ವಿಶ್ವಾಸದಲ್ಲಿದ್ದು, ಪಂದ್ಯಕ್ಕೂ ಮುನ್ನ ಉಭಯ ತಂಡಗಳಿಗೆ ಶಾಕ್​ ಒಂದು ಎದುರಾಗಿದ್ದು, ಈ ಪಂದ್ಯಕ್ಕೆ ಉಭಯ ತಂಡಗಳ ಒಟ್ಟು 5 ಆಟಗಾರರು ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    ಅಲಭ್ಯರಾಗಲಿರುವ ಐವರು ಆಟಗಾರರ ಪೈಕಿ ಮೂವರು ಚೆನ್ನೈ ಸೂಪರ್​ಕಿಂಗ್ಸ್​ ಹಾಗೂ ಇಬ್ಬರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪ್ಲೇಯರ್ಸ್​​ ಎಂದು ತಿಳಿದು ಬಂದಿದೆ. ಆ ಆಟಗಾರರು ಯಾರೆಂದರೆ… ಮೊಯಿನ್​ ಅಲಿ (ಇಂಗ್ಲೆಂಡ್), ವಿಲ್​ ಜಾಕ್ಸ್​ (ಇಂಗ್ಲೆಂಡ್), ರೀಸ್​ ಟಾಪ್ಲಿ (ಇಂಗ್ಲೆಂಡ್), ಮಥೀಶ ಪತಿರಾಣ (ಶ್ರೀಲಂಕಾ), ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ) ಈ ಆಟಗಾರರು ಆರ್​ಸಿಬಿ-ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಚುನಾವಣೆ ಮೇಲೆ ಪೆನ್‌ಡ್ರೈವ್‌ ಪ್ರಕರಣ ಪರಿಣಾಮ ಬೀರಲ್ಲ: ಸಿಎಂ ಸಿದ್ದರಾಮಯ್ಯ

    ಇಂಗ್ಲೆಂಡ್​ ತಂಡದ ಆಟಗಾರರಾದ ಮೊಯಿನ್​ ಅಲಿ, ವಿಲ್​ ಜಾಕ್ಸ್, ರೀಸ್​ ಟಾಪ್ಲಿ ಟಿ-20 ವಿಶ್ವಕಪ್​ಗೆ ಆಯ್ಕೆಯಾಗಿದ್ದು, ಇದಕ್ಕೂ ಮುನ್ನ ಮೇ 21 ರಿಂದ ಇಂಗ್ಲೆಂಡ್​ ಹಾಗೂ ಪಾಕಿಸ್ತಾನ ನಡುವೆ ಟಿ-20 ಸರಣಿ ಆಡಿಸಲಾಗುತ್ತದೆ.  ಅದಕ್ಕೂ ಮುನ್ನ ತಂಡವನ್ನು ಕೂಡಿಕೊಳ್ಳುವಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಹೀಗಾಗಿ ಈ ಮೂವರು ಆಟಗಾರರು ಐಪಿಎಲ್​ನಲ್ಲಿ ತಾವು ಆಡುತ್ತಿರುವ ತಂಡವನ್ನು ತೊರೆದು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ಹಾಲಿ ಐಪಿಎಲ್​ ಋತುವಿನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಪರ ಉತ್ತಮ ಪ್ರದರ್ಶನ ನೀಡಿದ್ದ ಬಾಂಗ್ಲಾದೇಶ ಮೂಲದ ವೇಗಿ ಮುಸ್ತಾಫಿಜುರ್​ ರೆಹಮಾನ್​ ಈಗಾಗಲೇ ಸಿಎಸ್​ಕೆ ಕ್ಯಾಂಪ್​​ಅನ್ನು ತೊರೆದಿದ್ದು, ಬಾಂಗ್ಲಾದೇಶ್ ತಂಡವು ಮೇ 21 ರಿಂದ ಯುಎಸ್​ಎ ವಿರುದ್ಧ ಟಿ20 ಸರಣಿ ಆಡಲಿದ್ದು, ಹೀಗಾಗಿ ಮುಸ್ತಫಿಜುರ್ ಕೂಡ ಸಿಎಸ್​ಕೆ ತಂಡದ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

    ಶ್ರೀಲಂಕಾ ತಂಡವು ಟಿ20 ವಿಶ್ವಕಪ್​ಗಾಗಿ ಯುಎಸ್ಎನತ್ತ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ ಮಥೀಶ ಪತಿರಾಣ ಕೂಡ ಇದ್ದು, ಹೀಗಾಗಿ ಸಿಎಸ್​ಕೆ ತಂಡದ ಮುಂದಿನ ಪಂದ್ಯಗಳಿಗೆ ಪತಿರಾಣ ಕೂಡ ಸಿಎಸ್​ಕೆಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯಕ್ಕೆ ಈ ಐವರು ಆಟಗಾರರು ಅಲಭ್ಯರಾಗಿದ್ದು, ಇವರು ಬದಲಿಯಾಗಿ ಫ್ರಾಂಚೈಸಿ ಯಾರನ್ನು ಆಯ್ಕೆ ಮಾಡುತ್ತದೆ ಎಂದು ಮೇ 18ರವರೆಗೂ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts