ಬೆಂಗಳೂರು: ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಬೆಳಗ್ಗೆ 11.30ಕ್ಕೆ ಪ್ರಕಟವಾಗಲಿದೆ. 6.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ನಂಬರ್ಗೂ ಫಲಿತಾಂಶ ನೇರವಾಗಿ ರವಾನೆಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಇಂದು ಬೆಳಗ್ಗೆ ಮತ್ತೆ ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್, ಇಂದು ರಾಜ್ಯದ ಎರಡನೇ ಪಿಯುಸಿ ಫಲಿತಾಂಶ ಬೆಳಿಗ್ಗೆ 11.30 ಗಂಟೆಗೆ ಪ್ರಕಟವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶ ನೋಡಲಿಕ್ಕೆ ಕಾಲೇಜುಗಳಿಗೆ ಬರುವ ಅವಶ್ಯಕತೆ ಇಲ್ಲ. ನಿಮ್ಮ ಮೊಬೈಲ್ ಗಳಿಗೇ SMS ಮೂಲಕ ನಿಮ್ಮ ಫಲಿತಾಂಶವನ್ನು ರವಾನಿಸಲಾಗುವುದು ಮತ್ತು http://karresults.nic.in ಈ ವೆಬ್ ಸೈಟ್ ನಲ್ಲಿ ಸಹ ಲಭ್ಯವಿರುತ್ತದೆ ಎಂದು ನೆನಪಿಸಿದ್ದಾರೆ.
ಮಾರ್ಚ್ 4 ರಿಂದ 21 ರ ತನಕ ವಿವಿಧ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಇಂಗ್ಲಿಷ್ ಭಾಷಾ ಪರೀಕ್ಷೆ ನಂತರದಲ್ಲಿ ನಡೆದಿತ್ತು.