ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿಗೆ ಅಗ್ರಪಟ್ಟ, ಚಿತ್ರದುರ್ಗಕ್ಕೆ ಕೊನೇ ಸ್ಥಾನ

ಬೆಂಗಳೂರು: ದ್ವಿತೀಯ ಪಿಯುಸಿಯ 2018-19ನೇ ಸಾಲಿನ ಫಲಿತಾಂಶ ಪ್ರಕಟವಾಗಿದೆ. puc.kar.nic.in ಮತ್ತು karresults.nic.in ವೆಬ್​ಸೈಟ್​ಗಳಲ್ಲಿ ಫಲಿತಾಂಶ ಪ್ರಕಟವಾಗಿದೆ. ಶೇ.92.02 ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ.51.42 ಫಲಿತಾಂಶದೊಂದಿಗೆ ಚಿತ್ರದುರ್ಗ ಜಿಲ್ಲೆ ಕೊನೇ ಸ್ಥಾನದಲ್ಲಿದೆ.

2018-19ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 6,71,653 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4,14,587 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಶೇ.61.73 ಫಲಿತಾಂಶ ಬಂದಿದೆ.

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 3,37,668 ಬಾಲಕರು ಪರೀಕ್ಷೆ ತೆಗೆದುಕೊಂಡಿದ್ದು, 1,86,690 ಬಾಲಕರು ತೇರ್ಗಡೆಯಾಗಿದ್ದಾರೆ. ಒಟ್ಟು 3,33,985 ಬಾಲಕಿಯರು ಪರೀಕ್ಷೆ ತೆಗೆದುಕೊಂಡಿದ್ದು, 2,27,897 ಬಾಲಕಿಯರು ರ್ತೇಡೆಯಾಗಿದ್ದಾರೆ.

ಕಲಾ ವಿಭಾಗದಲ್ಲಿ ಒಟ್ಟು 1,55,382 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಶೇ.52.60 ಫಲಿತಾಂಶದೊಂದಿಗೆ 89,505 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,14,793 ವಿದ್ಯಾರ್ಥಿಗಳ ಪೈಕಿ 1,57,167 ವಿದ್ಯಾರ್ಥಿಗಳು ಪಾಸಾಗಿದ್ದು, ಒಟ್ಟು ಶೇ.73.17 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 1,88,224 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,36,849 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವಿಭಾಗದಲ್ಲಿ ಶೆ.72.70 ಫಲಿತಾಂಶ ಬಂದಿದೆ.

ಸರ್ಕಾರಿ ಕಾಲೇಜುಗಳಲ್ಲಿ ಶೇ.50.94 ಪಲಿತಾಂಶ: ಈ ಸಾಲಿನಲ್ಲಿ 1.99,997 ವಿದ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದು, 1,01,888 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ತನ್ಮೂಲಕ ಶೇ.50.94 ಫಲಿತಾಂಶ ಬಂದಂತಾಗಿದೆ. ಅನುದಾನಿತ ಪ.ಪೂ. ಕಾಲೇಜಿನಲ್ಲಿ 1,19,749 ವಿದ್ಯಾರ್ಥಿಗಳಿಗೆ 72,352 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.60.42 ಫಲಿತಾಂಶ ಬಂದಿದೆ. ಅನುದಾನರಹಿತ ಪ.ಪೂ. ಕಾಲೇಜಿನಲ್ಲಿ 2,86,442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,96,768 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತನ್ಮೂಲಕ ಶೇ.68.69 ಫಲಿತಾಂಶ ಬಂದಿದೆ.

ಕಾರ್ಪೋರೇಷನ್​ ಪದವಿ ಪೂರ್ವ ಕಾಲೇಜುಗಳಲ್ಲಿ 2,167 ವಿದ್ಯಾಥಿಗಳಿಗೆ 1,250 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.57.68 ಫಲಿತಾಂಶ ಲಭ್ಯವಾಗಿದೆ. ವಿಭಜಿತ ಪ.ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದ 63,298 ವಿದ್ಯಾರ್ಥಿಗಳ ಪೈಕಿ 42,329 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.66.87 ಫಲಿತಾಂಶ ಲಭ್ಯವಾಗಿದೆ.

ದ.ಕನ್ನಡ ಜಿಲ್ಲೆಗೆ 2ನೇ ಸ್ಥಾನ
ದಕ್ಷಿಣ ಕನ್ನಡ ಜಿಲ್ಲೆ ಶೇ.90.91 ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಶೇ.83.31 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ 3ನೇ ಸ್ಥಾನ ಪಡೆದುಕೊಂಡಿದೆ. ಶೇ.98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದರೆ, 82 ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ.

ಉತ್ತರ ಕನ್ನಡ ಶೇ.79.59, ಚಿಕ್ಕಮಗಳೂರು ಶೇ.76.42, ಹಾಸನ ಶೇ.75.19, ಬಾಗಲಕೋಟೆ ಶೇ.74.26, ಬೆಂಗಳೂರು ದಕ್ಷಿಣ ಶೇ.74.25, ಶಿವಮೊಗ್ಗ ಶೇ.73.54, ಬೆಂಗಳೂರು ಗ್ರಾಮಾಂತರ ಶೇ.72.91, ಬೆಂಗಳೂರು ಉತ್ತರ ಶೇ.72.68, ಚಾಮರಾಜನಗರ ಶೇ.72.67, ಚಿಕ್ಕಬಳ್ಳಾಪುರ ಶೇ.70.11, ವಿಜಯಪುರ ಶೇ.68.55, ಮೈಸೂರು ಶೇ.68.55, ಹಾವೇರಿ ಶೇ.68.40, ತುಮಕೂರು ಶೇ.65.81, ಕೋಲಾರ 65.19, ಬಳ್ಳಾರಿ ಶೇ.64.87, ಕೊಪ್ಪಳ ಶೇ.63.15, ಮಂಡ್ಯ ಶೇ.63.08, ದಾವಣಗೆರೆ ಶೇ.62.53, ಧಾರವಾಡ ಶೇ.62.49, ರಾಮನಗರ ಶೇ.62.08, ಚಿಕ್ಕೋಡಿ 60.86, ಗದಗ ಶೇ.57.76, ರಾಯಚೂರು ಶೇ.56.73, ಬೆಳಗಾವಿ ಶೇ.56.18, ಕಲಬುರಗಿ ಶೇ.56.09, ಬೀದರ್​ ಶೇ.55.78 ಮತ್ತು ಯಾದಗಿರಿ ಶೇ.53.02 ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ.

One Reply to “ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿಗೆ ಅಗ್ರಪಟ್ಟ, ಚಿತ್ರದುರ್ಗಕ್ಕೆ ಕೊನೇ ಸ್ಥಾನ”

  1. ನೋಡೋಣ ಈಗ, ಸರ್ಕಾರ ಮತ್ತು ಸಂಬದ್ಧ ಪಟ್ಟ ಇಲಾಖೆಗಳು ಕೆಳಗುಳಿದಿರುವ ೧೦ ಜಿಲ್ಲೆಗಳ ಏಳಿಗೆಗೆ ಏನು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆ ಎಂದು – ಗುಂಜ್ಮ೦ಜ (GUNJMANJA)

Comments are closed.