ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕೇಳಲು ಬಾರದ ವಿದ್ಯಾರ್ಥಿಗಳಿಗೆ 100 ರೂ. ದಂಡ ವಿಧಿಸಿರುವ ಘಟನೆ ಡೆಹ್ರಾಡೂನ್ನ ಜಿಆರ್ಡಿ ನಿರಂಜನ್ಪುರ್ ಅಕಾಡೆಮಿಯಲ್ಲಿ ನಡೆದಿದೆ.
ಮನ್ ಕೀ ಬಾತ್ 100ನೇ ಕಂತಿನ ಪ್ರಸಾರವನ್ನು ಏ.30ರಂದು ಇಡೀ ದೇಶ ಸೇರಿದಂತೆ ಶಾಲೆಗಳಲ್ಲೂ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಗೈರು ಹಾಜರಾದವರಿಗೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವಂತೆ ಶಾಲಾ ಆಡಳಿತ ಮಂಡಳಿ ಶಾಲೆಯ ವಾಟ್ಸ್ಆಪ್ ಗ್ರೂಪ್ನಲ್ಲಿ ಆದೇಶ ಕಳುಹಿಸಿದ್ದ ಶಾಲೆ, ಇಲ್ಲದಿದ್ದರೆ 100 ರೂ. ದಂಡ ಕಟ್ಟುವಂತೆ ಸೂಚಿಸಿದೆ.
ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳ ಹಕ್ಕುಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಆರಿಫ್ ಖಾನ್ ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಜಿಆರ್ಡಿ ಅಕಾಡೆಮಿಗೆ ಶೋಕಾಸ್ ನೋಟಿಸ್ ನೀಡಿದ್ದು, 3 ದಿನಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.