ನ್ಯೂಸ್

ಹಿಂದು Hindu ಪದದ ಅರ್ಥ ಅಶ್ಲೀಲವಾಗಿದೆ... ಎಲ್ಲಿಂದಲೋ ಬಂದ ಧರ್ಮವನ್ನು ಹೇರಬೇಡಿ; ಸತೀಶ್ ಜಾರಕಿಹೊಳಿ

Bengaluru - General - Rama Kishan K V

ಚಿಕ್ಕೋಡಿ: ಹಿಂದೂ Hindu ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ Hindu ಎಂಬುದು ಪರ್ಷಿಯನ್ ಪದವಾಗಿದ್ದು, ಭಾರತೀಯ ಪದವೇ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ Satish Jarakiholi ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ Satish Jarakiholi ಮಾತನಾಡಿದ್ದಾರೆ.

ಭಾರತಕ್ಕೂ, ಪರ್ಷಿಯನ್​ಗೂ ಏನೂ ಸಂಬಂಧವಿಲ್ಲದಿದ್ದರೂ, ಹಿಂದೂ Hindu ಪದ ನಮ್ಮದು ಹೇಗಾಯಿತು ಎಂಬುವುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಿಂದೂ Hindu ಪದದ ಅರ್ಥ ಅಶ್ಲೀಲವಾಗಿದ್ದು, ನಿಜಾರ್ಥ ತಿಳಿದರೆ ನಾಚಿಕೆ ಆಗುತ್ತದೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಎಲ್ಲಿಂದಲೋ ಬಂದಿರುವ ಹಿಂದೂ Hindu ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದ ಎಂದು ಸತೀಶ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆಯಲ್ಲಿ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಹಿಂದೂ Hindu ಪದ ಪರ್ಶಿಯನ್ ಮೂಲದಿಂದ ಬಂದಿದೆ ಎಂದು ಹೇಳುತ್ತಿದ್ದಂತೆ ಹಲವರು ವಿರೋಧಿಸಿದ್ದಾರೆ. ಜಾರಕಿಹೊಳಿ ಆಡಿರುವ ಮಾತುಗಳು ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.