ನ್ಯೂಸ್

ಸರ್ಕಾರಿ ಕಾರ್ನರ್​: ಅನುಕಂಪದ ನೇಮಕಾತಿ ನಿಯಮಾವಳಿಗಳು ಹೀಗಿವೆ...

ಪ್ರಶ್ನೆ: ಪತಿ-ಪತ್ನಿ ಇಬ್ಬರೂ ಸರ್ಕಾರಿ ಗ್ರೂಪ್​ ಸಿ ನೌಕರರಾಗಿದ್ದು, ಪ್ರಸ್ತುತ ಪತಿ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಇಬ್ಬರೂ ಮಕ್ಕಳು ಅಪ್ರಾಪ್ತರು. ಹಾಗಾಗಿ ಪತಿಯ ಹುದ್ದೆ ಪತ್ನಿಗೆ ಲಭ್ಯವಾಗುವುದೇ? ಅಥವಾ ಮಕ್ಕಳು ಅಪ್ರಾಪ್ತರಾಗಿರುವ ಕಾರಣಕ್ಕೆ ಯಾರಿಗೆ ಉದ್ಯೋಗ ಸಿಗುತ್ತದೆ?
| ಜಗದೀಶ್​, ಚಿಕ್ಕಮಗಳೂರು

- 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕಾತಿ) ನಿಯಮಾವಳಿ ನಿಯಮ 5ರಂತೆ ಅಪ್ರಾಪ್ತ ಮಕ್ಕಳಿದ್ದಲ್ಲಿ ಸರ್ಕಾರಿ ನೌಕರ ನಿಧನ ಹೊಂದಿದ ದಿನಾಂಕದಿಂದ ಎರಡು ವರ್ಷಗಳೊಳಗೆ 18 ವರ್ಷ ಪೂರೈಸಿರಬೇಕು. ತದನಂತರ ಎರಡು ವರ್ಷದೊಳಗೆ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಬೇಕು. ಪತ್ನಿ ಸಿ ಗುಂಪಿನ ಹುದೆಯಲ್ಲಿರುವುದರಿಂದ ಈ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಆದ್ದರಿಂದ ತಂದೆಯ ಉದ್ಯೋಗ ಪಡೆಯಲು ಮಕ್ಕಳು ಅರ್ಹರಾಗುತ್ತಾರೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.