ನ್ಯೂಸ್

ಸರ್ಕಾರಿ ಕಾರ್ನರ್​: ಅನುಕಂಪದ ಆಧಾರದ ಮೇಲೆ ಕೆಲಸ

ದಿನದ ಪ್ರಶ್ನೆ

ನನ್ನ ತಂದೆ ಆರೋಗ್ಯ ಇಲಾಖೆಯಲ್ಲಿ ಡಿಗ್ರೂಪ್ ನೌಕರರಾಗಿದ್ದರು. ಇನ್ನೂ ಐದು ವರ್ಷ ಸೇವಾವಧಿ ಇದ್ದಾಗಲೇ ಆಕಸ್ಮಿಕವಾಗಿ ಮರಣ ಹೊಂದಿದ್ದರು. ನನ್ನ ತಂದೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ನಾನು ಹಿರಿಯವಳು. ನನಗೆ ವಿವಾಹವಾಗಿರುತ್ತದೆ. ನನ್ನ ಸಹೋದರಿ ಅವಿವಾಹಿತಳಾಗಿದ್ದು, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸು ಮಾಡಿದ್ದಾಳೆ. ನಾನು ಎಸ್.ಎಸ್.ಎಲ್.ಸಿ. ಟಿಸಿಎಚ್ ಪಾಸಾಗಿದ್ದೇನೆ. ಅನುಕಂಪದ ಆಧಾರದ ಮೇಲೆ ನಮಗೆ ಯಾವ ಕೆಲಸ ಸಿಗುತ್ತದೆ.

| ಪ್ರಮೀಳ ಕಾಮತ್ ಮಂಗಳೂರು

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮವಳಿಯ ನಿಯಮ 3ರಂತೆ ಮೃತ ಸರ್ಕಾರಿ ನೌಕರನ ಪತ್ನಿ ಅಥವಾ ಅವಿವಾಹಿತ ಮಕ್ಕಳಿಗೆ ಅನುಕಂಪದ ಮೇರೆಗೆ ಲಭ್ಯವಾಗುತ್ತದೆ. ನೀವು ವಿವಾಹವಾಗಿರುವುದರಿಂದ ನಿಮಗೆ ಈ ಹುದ್ದೆ ಲಭ್ಯವಾಗುವುದಿಲ್ಲ. ಆದರೆ, ನಿಮ್ಮ ಸಹೋದರಿ ಡಿಪ್ಲೋಮಾ ಮಾಡಿರುವುದರಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅನುಕಂಪದ ಮೇರೆಗೆ ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ನಿಮ್ಮ ತಂದೆ ನಿಧನದ ದಿನಾಂಕದಿಂದ ಒಂದು ವರ್ಷದೊಳಗೆ ಸಲ್ಲಿಸಬೇಕು.