ನ್ಯೂಸ್

ಸರ್ಕಾರಿ ಕಾರ್ನರ್ | ಉನ್ನತ ವ್ಯಾಸಂಗಕ್ಕೆ ರಜೆ ಮಂಜೂರಾತಿ

Webdesk - Ravikanth
ದಿನದ ಪ್ರಶ್ನೆ 

ನಾನು 2020ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ಈಗ ಸಿವಿಲ್ ಸರ್ವಿಸ್ ಪರೀಕ್ಷೆಗೆ ಹಾಜರಾಗಲು ಹಾಗೂ ಪೂರ್ವಭಾವಿ ತಯಾರಿಗೆ ದೀರ್ಘ ರಜೆ ಪಡೆಯಲು ಅವಕಾಶವಿದೆಯೇ?

| ಪ್ರಭಾಕರ್ ಕೋಲಾರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 112ರ ಮೇರೆಗೆ ನೀವು ವೈದ್ಯಕೀಯ ಪ್ರಮಾಣಪತ್ರ ಇಲ್ಲದೆ ಮೂರು ತಿಂಗಳು ಗಳಿಕೆ ರಜೆ ಪಡೆಯಬಹುದು. ಅದಕ್ಕಿಂತ ಹೆಚ್ಚಾದಲ್ಲಿ ನಿಮ್ಮ ರಜೆ ಮಂಜೂರಾತಿ ಪಾಧಿಕಾರದ ಅನುಮತಿ ಪಡೆದು ಮತ್ತೆ ರಜೆ ಮುಂದುವರಿಸಬಹುದು. ಇಲ್ಲದೆ ಹೋದರೆ ನಿಯಮ 117ರ ಮೇರೆಗೆ ಅಸಾಧಾರಣ ರಜೆ ಸಹ ಪಡೆಯಬಹುದಾಗಿರುತ್ತದೆ.