ನವದೆಹಲಿ: ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಜಗತ್ತಿನಲ್ಲೇ ಅತಿ ದೊಡ್ಡ ಚಿಕಿತ್ಸಾ ಕೇಂದ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣಗೊಂಡಿದೆ. ಏಕಕಾಲಕ್ಕೆ 10,000 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ.
ದಕ್ಷಿಣ ದೆಹಲಿಯ ಛತ್ತರಪುರ್ದಲ್ಲಿರುವ ರಾಧಾ ಸಓಮಿ ಸತ್ಸಂಗ ಬಿಯಾಸ್ ಕೇಂದ್ರದ 300 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್ನ (ಐಟಿಬಿಪಿ) ಹಾಗೂ ಇತರ ಕೇಂದ್ರೀಯ ಪಡೆಗಳ ವೈದ್ಯರು, ನರ್ಸ್ಗಳು ಸೇರಿ 3,000ಕ್ಕೂ ವೈದ್ಯಕೀಯ ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!
* ಪ್ರತಿ ರೋಗಿಗೆ ಪ್ರತ್ಯೇಕ ಹಾಸಿಗೆ, ಕುರ್ಚಿ, ಪ್ಲಾಸ್ಟಿಕ್ ಕಬೋರ್ಡ್, ಡಸ್ಟ್ಬಿನ್, ಸೋಪು, ಪೇಸ್ಟ್ ಕಿಟ್ ಹಾಗೂ ಚಾರ್ಜಿಂಗ್ ಪಾಯಿಂಟ್ ನೀಡಲಾಗಿದೆ.
* ರೋಗಿಗಳ ಮನರಂಜನೆಗಾಗಿ ಅಲ್ಲಲ್ಲಿ ದೊಡ್ಡ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ.
* ದೆಹಲಿಯಲ್ಲಿ ಭಾರಿ ಸೆಖೆ ಇರುವುದರಿಂದ ಇಡೀ ಕೇಂದ್ರಕ್ಕೆ ಸೆಂಟ್ರಲೈಸ್ಡ್ ಎಸಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 18 ಸಾವಿರ ಟನ್ ಸಾಮರ್ಥ್ಯದ ಎಸಿ ವ್ಯವಸ್ಥೆ ಇಲ್ಲಿದೆ.
* ಇಲ್ಲಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು 22 ಕಿಮೀ. ದೂರದಷ್ಟು ಭೂಗತ ಕೇಬಲ್, 20 ಟ್ರಾನ್ಸಫಾರ್ಮರ್ ಅಳವಡಿಸಲಾಗಿದೆ.