ನ್ಯೂಸ್

Bigg Boss Kannada S10: ‘ಸೋತಾಗ ಸರ್ಚಿಂಗ್ ಸಿಗತ್ತೆ, ಗೆದ್ದಾಗ ತಟಸ್ಥವಾಗತ್ತೆ’; ಏನಿದು ಫಿಲಾಸಫಿ?

ಮೋಹನ್​ ಶೆಟ್ಟಿ

ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಇದೀಗ 10ನೇ ಸೀಸನ್​ಗೆ ಕಾಲಿಟ್ಟಿದ್ದು, ಗ್ರ್ಯಾಂಡ್​ ಓಪನಿಂಗ್​ ಮೂಲಕ ಚಾಲನೆ ಪಡೆದುಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ಸ್ಪರ್ಧಿಗಳು ಬಿಗ್​ ಮನೆಗೆ ಎಂಟ್ರಿ ಕೊಟ್ಟಿರುವುದು ಈಗಾಗಲೇ ಕಾರ್ಯಕ್ರಮದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೂ ಇತರೆ ಜನಪ್ರಿಯ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡ ಸಂತೋಷ್​ ಅಲಿಯಾಸ್​ ತುಕಾಲಿ ಸಂತು​ ಮನೆ ಮಂದಿಯನ್ನು ತಮ್ಮ ಸಂಭಾಷಣೆಗಿಂತಲೂ ಹಾಸ್ಯ ಮಾತುಗಳ ಮುಖೇನ ಸೆಳೆಯುತ್ತಿದ್ದು, ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ಈ ಮಧ್ಯೆ ಒಂದಷ್ಟು ಬಿಸಿ ಬಿಸಿ ವಾಗ್ವಾದ ಕೂಡ ನಡೆದಿವೆ.

ಕಿರುತೆರೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿ, ಪ್ರೇಕ್ಷಕರನ್ನು ಹಲವು ಸಮಯಗಳ ಕಾಲ ಮನರಂಜಿಸಿದ ನಟಿ ಸಿರಿ ಮತ್ತು ಸಂತು ನಡುವೆ ಮನೆಯೊಳಗೆ ಸುದೀರ್ಘ ಚರ್ಚೆಯೊಂದು ಆರಂಭಗೊಂಡಿದೆ. ಈ ಚರ್ಚೆ ಏನು? ತುಕಾಲಿ ಸಂತೋಷ್‌ ಫಿಲಾಸಫಿ ಯಾವುದರ ಬಗ್ಗೆ ಎಂಬುದು ಸದ್ಯ ವೀಕ್ಷಕರ ಪ್ರಶ್ನೆಯಾಗಿದೆ.

ಯಾವಾಗ್ಲೂ ಕಾಮಿಡಿ ಮಾಡುವ ಸಂತೋಷ್‌ ಅವರ ಇನ್ನೊಂದು ಮುಖ ಇಲ್ಲಿದೆ. ಎಲ್ಲರನ್ನೂ ಸದಾ ನಗಿಸುತ್ತ ಇರುವ ಸಂತೋಷ್‌ ವ್ಯಕ್ತಿತ್ವಕ್ಕೆ ಫಿಲಾಸಫಿ ಹೇಳುವ ಇನ್ನೊಂದು ಆಯಾಮವೂ ಇದೆ. ‘ಸೋತಾಗ ಸರ್ಚಿಂಗ್ ಸಿಗತ್ತೆ. ಗೆದ್ದಾಗ ತಟಸ್ಥವಾಗತ್ತೆ’ ಎನ್ನೋದು ಸಂತೋಷ್‌ ಟಾಸ್ಕ್ ಫಿಲಾಸಫಿ. ಬಿಗ್​ ಬಾಸ್​ ಮನೆಯಲ್ಲಿ ಸದ್ಯ ಸಂತೋಷ್‌ ಮತ್ತು ಸಿರಿ ನಡುವಿನ ಸೋಲು-ಗೆಲುವಿನ ಚರ್ಚೆ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ನಮ್ರತಾ ಗೌಡ, ಡ್ರೋನ್​ ಪ್ರತಾಪ್, ಅಭಿನವ್​ ವಿಶ್ವನಾಥನ್​, ಸ್ನೇಹಿತ್​ ಗೌಡ, ಈಶಾನಿ, ಭಾಗ್ಯಶ್ರೀ ರಾವ್​, ತನಿಶಾ ಕುಪ್ಪಂಡ, ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ವಿನಯ್​ ಗೌಡ, ಗೌರೀಶ್​ ಅಕ್ಕಿ, ರಕ್ಷಕ್​ ಬುಲ್ಲೆಟ್​, ಸಂಗೀತಾ ಶೃಂಗೇರಿ, ಸ್ನೇಕ್​ ಶ್ಯಾಮ್, ಕೋಮಲ್, ನೀತು ವನಜಾಕ್ಷಿ ಬಿಗ್​ ಮನೆಗೆ ಬಿಗ್​ ಆಗಿ ಎಂಟ್ರಿ ಕೊಟ್ಟ ಕಂಟೆಸ್ಟೆಂಟ್​ಗಳು.