90 ವರ್ಷಗಳ ಕಾಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಭಾರತೀಯ ದಂಪತಿ ಯಾರು ಗೊತ್ತಾ?

couple
Published on

ಬ್ರಿಟನ್​​: ಮದುವೆ ನಂತರ 25 ವರ್ಷ 50 ವರ್ಷ ಜತೆಯಾಗಿ ಬದುಕಿದರೆ ವಿವಾಹ ವಾರ್ಷಿಕೋತ್ಸವವನ್ನು ದಂಪತಿ ಆಚರಣೆ ಮಾಡಿಕೊಳ್ಳುವುದನ್ನೂ ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ಇಲ್ಲೊಂದು ಹಿರಿಯ ಜೋಡಿ 90ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು.

ದಾಖಲೆ ಬರೆದ ವಿಶೇಷ ಜೋಡಿ:  ಬ್ರಿಟನ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಕರಮ್ ಚಂದ್ ಹಾಗೂ ಪತ್ನಿ ಕರ್ತಾರಿ ಚಾಂದ್ 1925ರ ಡಿಸೆಂಬರ್ 11 ರಂದು ಇವರು ಭಾರತದಲ್ಲಿ ಸಿಖ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯ ನಂತರ ಇಷ್ಟು 90 ವರ್ಷಗಳಸುಧೀರ್ಘ ಕಾಲ ಬಾಳಿ ಬದುಕಿದ ಏಕೈಕ ಜೋಡಿ ಇವರೆನಿಸಿದ್ದಾರೆ.

2016ರಲ್ಲಿ ಕರಮ್ ಚಂದ್ ಅವರು ತಮ್ಮ 110ನೇ ವರ್ಷದಲ್ಲಿ ಪ್ರಾಣ ಬಿಟ್ಟರು. ಇವರ ಸಾವಿನೊಂದಿಗೆ 90 ವರ್ಷ 107 ದಿನದ ಸುದೀರ್ಘ ವಿವಾಹವೊಂದು ಅಂತ್ಯವಾಯ್ತು. ನಂತರ ಪತಿಯ ಸಾವಿನ ಮೂರು ವರ್ಷಗಳ ನಂತರ 2019ರಲ್ಲಿ  ಕರ್ತರಿ ಕೂಡ ಉಸಿರುಚೆಲ್ಲಿದರು.

ಕರ್ತರಿ ಹಾಗೂ ಕರಮ್ ಇಬ್ಬರು ಪಂಜಾಬ್‌ನಲ್ಲಿ ಹುಟ್ಟಿದವರಾಗಿದ್ದು, 1965ರಲ್ಲಿ ಯುಕೆಗೆ ವಲಸೆ ಹೋದರು. ಈ ದಂಪತಿ 8 ಮಕ್ಕಳು, 27 ಮರಿಮಕ್ಕಳು, 23 ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಇವರ 90ನೇ ವರ್ಷದ ವಿವಾಹ ವಾರ್ಷಿಕೋತ್ಸವ ಅಕ್ಟೋಬರ್ 2016ರಲ್ಲಿ ಬಹಳ ಅದ್ದೂರಿಯಾಗಿ  ನಡೆದಿತ್ತು, ಬ್ರಿಟಿಷ್ ಮಾಧ್ಯಮಗಳು ಕೂಡ ಇದನ್ನು ವರದಿ ಮಾಡಿದ್ದರು.

ಗ್ರಾನೈಟ್ ವಿವಾಹ ವಾರ್ಷಿಕೋತ್ಸವ ಎಂದರೇನು?: ವಿವಾಹ ವಾರ್ಷಿಕೋತ್ಸವದ ಅವಧಿಯನ್ನು ಆಧರಿಸಿ ಒಂದೊಂದು ಸಮಯದ ವಿವಾಹ ವಾರ್ಷಿಕೋತ್ಸವವನ್ನು ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ಅದೇ ರೀತಿ ಇವರ ವಾರ್ಷಿಕೋತ್ಸವಕ್ಕೆ 'ಗ್ರಾನೈಟ್ ವಿವಾಹ ವಾರ್ಷಿಕೋತ್ಸವ' ಎಂದು ಕರೆಯಲಾಗಿತ್ತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net