

ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ 10ನೇ ಸೀಸನ್ಗೆ ಕಾಲಿಟ್ಟಿದ್ದು, ಗ್ರ್ಯಾಂಡ್ ಓಪನಿಂಗ್ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರ ಪೈಕಿ ಈಗಾಗಲೇ ಕಿರು ಪರಿಚಯದ ಜತೆಗೆ ಮಾತಿನ ಕಿಚ್ಚು ಕೂಡ ಜೋರಾಗಿಯೇ ಆರಂಭಗೊಂಡಿದೆ.
ಬಿಗ್ ಮನೆಯಲ್ಲಿ ಡ್ರೋಣ್ ಪ್ರತಾಪ್ ಕುರಿತು ಹಾಸ್ಯ ಶುರುವಾಗಿದ್ದು, ತುಕಾಲಿ ಸಂತೋಷ್, ವಿನಯ್, ರಕ್ಷಕ್, ಸ್ನೇಹಿತ್ ಸೇರಿದಂತೆ ಎಲ್ಲರೂ ಊಟದ ಟೇಬಲ್ ಬಳಿ ಕುರಿತು ಪ್ರತಾಪ್ ಮನೆಯೊಳಗೆ ಇದ್ದ ಕೆಲ ಪ್ರಸಂಗಗಳನ್ನು ಮುಂದಿಟ್ಟು ಕಾಮಿಡಿ ಮಾಡಿದ್ದಾರೆ. ಈ ವೇಳೆ ಮನೆಯವರನ್ನು ನಗೆಪಾಟಲಿಗೆ ದೂಡಿದ ತುಕಾಲಿ ಸಂತು, ಅವನು ಡ್ರೋಣ್ ಕಡೆ ಗಮನಹರಿಸುತ್ತಿಲ್ಲ, ರೊಟ್ಟಿ ಕಡೆ ಗಮನಹರಿಸುತ್ತಿದ್ದಾನೆ ಎಂದು ಹೇಳಿದ್ದಾರೆ.
ತುಕಾಲಿ ಸಂತೋಷ್, ಸ್ನೇಹಿತ್ ಮತ್ತು ವಿನಯ್ ಎಲ್ಲರೂ ಸೇರಿ ಹಾಸ್ಯ ಮಾಡುತ್ತಿದ್ದರೆ, ಮನೆಯ ಮೂಲೆಯಲ್ಲಿ ನಿಂತು ಪ್ರತಾಪ್ ನಕ್ಕಿದ್ದಾರೆ. ತುಕಾಲಿ ಸಂತೋಷ್ ಕಾಮಿಡಿಗೆ ಸಿಲುಕಿದ ಡ್ರೋಣ್ ಪ್ರತಾಪ್, ರೊಟ್ಟಿ ಪ್ರತಾಪ್ ಆದ್ರಾ? ಎಂಬುದನ್ನು ಪೂರ್ತಿಯಾಗಿ ಇಂದಿನ ಸಂಚಿಕೆಯಲ್ಲಿ ತಿಳಿಯಬಹುದು.
ನಮ್ರತಾ ಗೌಡ, ಡ್ರೋನ್ ಪ್ರತಾಪ್, ಅಭಿನವ್ ವಿಶ್ವನಾಥನ್, ಸ್ನೇಹಿತ್ ಗೌಡ, ಈಶಾನಿ, ಭಾಗ್ಯಶ್ರೀ ರಾವ್, ತನಿಶಾ ಕುಪ್ಪಂಡ, ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ, ಗೌರೀಶ್ ಅಕ್ಕಿ, ರಕ್ಷಕ್ ಬುಲ್ಲೆಟ್, ಸಂಗೀತಾ ಶೃಂಗೇರಿ, ಸ್ನೇಕ್ ಶ್ಯಾಮ್, ಕೋಮಲ್, ನೀತು ವನಜಾಕ್ಷಿ ಬಿಗ್ ಮನೆಗೆ ಬಿಗ್ ಆಗಿ ಎಂಟ್ರಿ ಕೊಟ್ಟ ಕಂಟೆಸ್ಟೆಂಟ್ಗಳು.
ಬಿಗ್ಬಾಸ್ ಕನ್ನಡ ಸೀಸನ್ 10ರ ಪ್ರತಿದಿನದ ಸಂಚಿಕೆಗಳನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಮತ್ತು 24
ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ (JioCinema) ನೋಡಬಹುದು.