ನ್ಯೂಸ್

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್​ ಪರ ಬ್ಯಾಟ್​ ಬೀಸಿದ ಅನುರಾಗ್​​ ಠಾಕೂರ್​! | Stampede Case

ಹೈದರಾಬಾದ್​: ಇಲ್ಲಿನ ಸಂಧ್ಯಾ ಚಿತ್ರಮಂದಿದಲ್ಲಿ ಡಿ.4ರಂದು ಕಾಲ್ತುಳಿತ(Stampede Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಲಂಗಾಣ ಕಾಂಗ್ರೆಸ್​ ನಾಯಕರು ನಟ ಅಲ್ಲು ಅರ್ಜುನ್​ ಮೇಲೆ ಮುಗಿಬಿದ್ದ ಹಿನ್ನೆಲೆ ಕೇಂದ್ರ ಸಚಿವ ಅನುರಾಗ್​ ಠಾಕೂರ್ ಟೀಕಿಸಿದ್ದಾರೆ.

ಕೆಲ ಕಾಂಗ್ರೆಸ್​ ನಾಯಕರು ತೆಲುಗು ಚಿತ್ರರಂಗದ ಪ್ರತಿಷ್ಠೆಗೆ ಧಕ್ಕೆ ತರುವಂತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರು ಈ ಕೂಡಲೇ ಇಂತಹ ಹೇಳಿಕೆಗಳನ್ನು ತಡೆಯಿಡಿಯಬೇಕು ಎಂದು ಠಾಕೂರ್​ ಒತ್ತಾಯಿಸಿದರು.

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಿಪೇಯಿ ಜನ್ಮದಿನ ಅಂಗವಾಗಿ ಇದೇ ಬುಧವಾರ(ಡಿ.25) ದಂದು ಹೈದರಾಬಾದ್​ನ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

''ಜಾಗತಿಕ ಸಿನಿಮೀಯ ವೇದಿಕೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚುಸುವಲ್ಲಿ ​ದಕ್ಷಿಣ ಭಾರತೀಯ ಸಿನಿಮಾಗಳು ಅದರಲ್ಲಿ ತೆಲುಗು ಚಲನಚಿತ್ರಗಳು ಮಹತ್ವದ ಕೊಡುಗೆ ನೀಡಿವೆ ಎಂದು ಒತ್ತಿ ಹೇಳಿದ ಠಾಕೂರ್​​, ಕೆಲ ಕಾಂಗ್ರೆಸ್​ ನಾಯಕರು ಮಾಡಿದ ನಕರಾತ್ಮಕ ಕಾಮೆಂಟ್​ಗಳಿಂದ ಇದು ಸಿನಿಮಾ ಉದ್ಯಮದ ಸಾಧನೆಗಳನ್ನು ದರ್ಬಲಗೊಳಿಸಬಹುದು'' ಎಂದು ಕಳವಳ ವ್ಯಕ್ತಪಡಿಸಿದರು.

ದಕ್ಷಿಣ ಭಾರತದ ಚಿತ್ರೋದ್ಯಮ ಮತ್ತು ತೆಲುಗು ಸಿನಿಮಾಗಳು ಭಾರತ ಚಲನಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದೆ. ದುರದೃಷ್ಟವಶಾತ್​ ಇಂತಗ ಆಧಾರರಹಿತ ಹೇಳಿಕೆಗಳು ಈ ಖ್ಯಾತಿಗೆ ಕಳಂಕ ತರುವ ಅಪಾಯವಿದೆ ಎಂದರು.

ಪ್ರಧಾನಿ ಮೋದಿ ಸರ್ಕಾರದ ಅಡಿಯಲ್ಲಿ ನಾನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವನಾಗಿದ್ದಾಗ ಅಲ್ಲು ಅರ್ಜುನ್​ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದ ಅವರು, ಕಾಂಗ್ರೆಸ್​ ನಾಯಕರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಟೀಕಿಸಿದರು ಅಲ್ಲದೆ, ಇದರಿಂದ ಕಲಾವಿದರ ಪ್ರತಿಷ್ಠೆಗೆ ಹಾನಿಯಾಗಬಹುದು ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​).