ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ ಕಿಡಿ ಹೊತ್ತಿ ಉರಿಯುತ್ತಿದೆ. ಚಂದನವನದ 'ತುಪ್ಪ'ದ ಬೆಡಗಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರ ಬಂಧನಕ್ಕೊಳಪಟ್ಟಿದ್ದಾರೆ. ನಟಿ ಸಂಜನಾ ಗಲ್ರಾನಿಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಸಂಜನಾ ಆಪ್ತ ರಾಹುಲ್, ರಾಗಿಣಿ ಗೆಳೆಯ ರವಿಶಂಕರ್ನನ್ನೂ ಬಂಧಿಸಿಲಾಗಿದೆ. ಇನ್ನು ಹೆಚ್ಚಿನ ನಟ-ನಟಿಯರು ಸಿಕ್ಕಿಬೀಳುವ ಸಾಧ್ಯತೆ ಇದ್ದು, ಕೆಲವರ ಕೃತ್ಯಕ್ಕೆ ಇಡೀ ಚಿತ್ರರಂಗವೇ ಸದ್ಯ ಮಂಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತುರ್ತು ಮೀಟಿಂಗ್ ಕರೆದಿದೆ.
ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್ ಇಂದು(ಶನಿವಾರ) ಬೆಳಗ್ಗೆ 11.30ಕ್ಕೆ ತುರ್ತು ಮೀಟಿಂಗ್ ಕರೆದಿದ್ದು ಹಲವು ಮಹತ್ತರ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚೆಯಾಗಲಿದೆ. ಡ್ರಗ್ ಮಾಫಿಯಾದಲ್ಲಿ ಚಿತ್ರರಂಗದ ನಂಟಿನ ಕುರಿತು ಚರ್ಚೆ, ನಟಿ ರಾಗಿಣಿ ವಿಷಯದಲ್ಲಿ ಮುಂದಿನ ನಿರ್ಧಾರ? ಇನ್ನೂ ಹೆಚ್ಚಿನ ನಟ-ನಟಿಯರು ಸಿಕ್ಕಿಬಿದ್ದರೆ ಏನು ಮಾಡಬೇಕು ಎಂದೆಲ್ಲ ತೀರ್ಮಾನ ತೆಗೆದುಕೊಳ್ಳಲಿದೆ. ಇದನ್ನೂ ಓದಿರಿ ತಾರೆಗಳ ನಶೆ ಇಳಿಸಿದ ಸಿಸಿಬಿ: ನಟಿ ರಾಗಿಣಿ ಸೇರಿ ಮೂವರ ಬಂಧನ
ತುರ್ತು ಮೀಟಿಂನ್ನಲ್ಲಿ ಫಿಲಂ ಚೇಂಬರ್ನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಲಾವಿದರ ಸಂಘದ ಪರವಾಗಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು 'ದಿಗ್ವಿಜಯ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.