'ಮಾದಕ' ನಟಿ ರಾಗಿಣಿ ಗೆಳೆಯ ರವಿಶಂಕರ್​ಗೆ ಮತ್ತೊಂದು ಆಘಾತ

Ragini
Published on

ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ನಟಿ ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್​ಗೆ ಕೆಲಸದಿಂದ ಅಮಾನತು ಮಾಡಲಾಗಿದೆ.

ಜಯನಗರ ಆರ್​ಟಿಒ ಕಚೇರಿಯ ದ್ವಿತೀಯ ದರ್ಜೆ ಕ್ಲರ್ಕ್​ ಆಗಿರುವ ಬಿ.ಕೆ. ರವಿಶಂಕರ್​ನನ್ನು ಅಮಾನತು ಮಾಡಿ ಸಾರಿಗೆ ಆಯುಕ್ತ ಎನ್​.ಶಿವಕುಮಾರ್​ ಆದೇಶಿಸಿದ್ದಾರೆ. ಸರ್ಕಾರಿ ನೌಕರರಾಗಿ ಸರ್ಕಾರದ ಮತ್ತು ಸಾರಿಗೆ ಇಲಾಖೆಯ ಘನತೆ ಎತ್ತಿ ಹಿಡಿಯಬೇಕಾಗಿದ್ದ ರವಿಶಂಕರ್​, ಡ್ರಗ್ಸ್​ ಸರಬರಾಜು ಆರೋಪಕ್ಕೆ ತುತ್ತಾಗಿ ಬಂಧಿತನಾಗುವ ಮೂಲಕ ಇಲಾಖೆ ಹೆಸರಿಗೆ ಕಳಂಕ ತಂದಿರುವುದು ಮೇಲ್ನೋಟದ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿರಿ ‘ನಶೆ’ಯ ನಗ್ನ ಸತ್ಯ; ಸುದ್ದಿಗೋಷ್ಠಿಯಲ್ಲಿ ​ಸ್ಫೋಟಕ ಮಾಹಿತಿ ನೀಡಿದ್ರು ಪೊಲೀಸ್​ ಕಮಿಷನರ್

ಈ ಕುರಿತಂತೆ ಬೆಂಗಳೂರು ದಕ್ಷಿಣದ ಉಪ ಸಾರಿಗೆ ಆಯುಕ್ತರು ಪತ್ರ ಬರೆದಿದ್ದಲ್ಲದೆ, ನಗರ ಅಪರಾಧ ದಳದ ಸಹಾಯಕ ಪೊಲೀಸ್​ ಆಯುಕ್ತರು ಮಾಹಿತಿ ನೀಡಿದ್ದಾರೆ. ಹೀಗಾಗಿ ನಿಯದಂತೆ ರವಿಶಂಕರ್​ನನ್ನು ಅಮಾತನು ಮಾಡಲಾಗುವುದು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ರವಿಶಂಕರ್​ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದಾಗಿಯೂ ಉಲ್ಲೇಖಿಸಿದ್ದಾರೆ.

ರವಿಶಂಕರ್​ ಬಂಧನದ ಬಳಿಕ ನಟಿ ಸಂಜನಾರ ಆಪ್ತ ರಾಹುಲ್​ನನ್ನೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ರವಿಶಂಕರ್​ ಬಾಯ್ಬಿಟ್ಟ ಮಾಹಿತಿ ಮೇರೆಗೆ ರಾಗಿಣಿ ದ್ವಿವೇದಿಗೂ ಬುಧವಾರವೇ ಸಿಸಿಬಿ ನೊಟೀಸ್​ ಜಾರಿ ಮಾಡಿತ್ತು. ಆದರೂ ರಾಗಿಣಿ ವಿಚಾರಣಗೆ ಗೈರಾಗಿದ್ದರಲ್ಲದೆ ಸೋಮವಾರ ಬರುವುದಾಗಿ ಹೇಳಿದ್ದರು. ಇಂದು(ಶುಕ್ರವಾರ) ಬೆಳ್ಳಂಬೆಳಗ್ಗೆ ರಾಗಿಣಿ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇಂದು ಸಂಜೆ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net