More

    ‘ಮಾದಕ’ ನಟಿ ರಾಗಿಣಿ ಬಂಧನ: ಮನೆಯಲ್ಲಿ ಡ್ರಗ್ಸ್ ಪತ್ತೆ…!

    ಬೆಂಗಳೂರು: ಮಾದಕ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರನ್ನು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ವಿಚಾರಣೆಗೆ ಆಗಮಿಸಿದ ರಾಗಿಣಿ ಅವರನ್ನು ಸಿಸಿಬಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದರು. ಅವರನ್ನು ಬಂಧಿಸಿರುವ ಬಗ್ಗೆ ಸಂಜೆಯಷ್ಟೇ ಸಿಸಿಬಿ ಜಂಟಿ‌ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

    ಬುಧವಾರವಷ್ಟೇ ರಾಗಿಣಿಗೆ ಸಿಸಿಬಿ ನೋಟಿಸ್​ ನೀಡಿ, ವಿಚಾರಣೆಗೆ ಹಾಜರಾಗಲು ಹೇಳಿತ್ತು. ಆದರೆ ತಲೆಮರೆಸಿಕೊಂಡಿದ್ದ ರಾಗಿಣಿ ವಕೀಲರೊಂದಿಗೆ ಪಾರಾಗುವ ದಾರಿ ಹುಡುಕುತ್ತಿದ್ದರು. ಅಲ್ಲದೆ, ಸೋಮವಾರ ಹಾಜರಾಗುವುದಾಗಿ ಟ್ವೀಟ್​ ಮೂಲಕ ಹೇಳಿದ್ದರು. ಇದನ್ನು ನಿರಾಕರಿಸಿದ ಸಿಸಿಬಿ ಮತ್ತೊಂದು ನೋಟಿಸ್​ ಹೊರಡಿಸಿ, ಗುರುವಾರವೇ ಹಾಜರಾಗಲು ಖಡಾಖಂಡಿತವಾಗಿ ಹೇಳಿತ್ತು.

    ಇದಕ್ಕೂ ಮೊದಲು ರಾಗಿಣಿ ಆಪ್ತ ರವಿಶಂಕರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಸಾಕಷ್ಟು ಮಾಹಿತಿಯನ್ನು ರವಿಶಂಕರ್ ನೀಡಿದ್ದ. ನಾನು ರಾಗಿಣಿ ಜತೆ ಲಿವಿಂಗ್ ಟುಗೆದರ್ ಶಿಪ್​ನಲ್ಲಿದ್ದೀನಿ ಎಂದು ಒಪ್ಪಿಕೊಂಡಿದ್ದ. ಆರ್​ಟಿಒ ಅಧಿಕಾರಿಯಾಗಿ ತಿಂಗಳಿಗೆ 30 ರಿಂದ 35 ಸಾವಿರ ರೂ. ಸಂಬಳ ಪಡೆಯುವ ರವಿಶಂಕರ್​, ರಾಗಿಣಿಗೆ ಒಂದು ಲಕ್ಷ ರೂ. ಖರ್ಚು ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಹೇಳಿದ್ದ. ಹೀಗಾಗಿ ಆತನ ಆದಾಯದ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ರವಿಶಂಕರ್​ ಹೇಳಿಕೆ ದಾಖಲಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಗಿಣಿ ಅವರನ್ನು ಸಿಸಿಬಿ ವಿಚಾರಣೆಗೆ ಕರೆದಿದ್ದರು. ಅದರಂತೆಯೇ ಇಂದು ವಿಚಾರಣೆ ಎದುರಿಸಿದ ರಾಗಿಣಿ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ಡ್ರಗ್ಸ್ ಪತ್ತೆ
    ಇನ್ನು ನಟಿ ರಾಗಿಣಿ ಮನೆಯಲ್ಲಿ ಡ್ರಗ್ಸ್ ಸಹ ಪತ್ತೆಯಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ, ಯಾವ ಮಾದರಿಯ ಡ್ರಗ್ಸ್ ಎಂಬುವದನ್ನು ಸ್ಪಷ್ಟ ಪಡಿಸಿಲ್ಲ. ಡ್ರಗ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts