ನ್ಯೂಸ್

ಸನಾತನ ಧರ್ಮ ಹೊರತುಪಡಿಸಿದರೆ ಉಳಿದೆಲ್ಲವೂ...: ಯೋಗಿ ಆದಿತ್ಯನಾಥ್

ಲಖನೌ: ಸನತಾನ ಧರ್ಮವನ್ನು ಹೊರತುಪಡಿಸಿದರೆ ಉಳಿದೆಲ್ಲ ಧರ್ಮಗಳು ಪಂಥ ಮತ್ತು ಪೂಜಾ ವಿಧಾನಗಳು. ಒಂದು ವೇಳೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿದರೆ ವಿಶ್ವದಲ್ಲಿ ಮಾನವೀಯತೆಯೆ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಉತ್ತರಪ್ರದೇಶದ ಗೋರಖ್​ಪುರದಲ್ಲಿ ಆಯೋಜಿಸಲಾಗಿದ್ದ ಸಂತ ಮಹಾಂತ ದಿಗ್ವಿಜಯ ಅವರ 54ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಪಕ್ಷಗಳ ಒಕ್ಕೂಟ ಇಂಡಿಯಾಕ್ಕೆ ಚಾಟಿ ಬೀಸಿದ್ದಾರೆ.

ಉತ್ತರಪ್ರದೇಶದ ಗೋರಖ್​ಪುರದಲ್ಲಿ ಆಯೋಜಿಸಲಾಗಿದ್ದ ಶ್ರೀಮದ್ ಭಾಗವತ ಕಥಾ ಜ್ಞಾನ ಯಾಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯೋಗಿ, ಸನಾತನವು ಮಾನವೀಯತೆಯ ಧರ್ಮವಾಗಿದ್ದು, ಉಳಿದೆಲ್ಲವೂ ಪಂಥ ಹಾಗೂ ಪೂಜಾ ವಿಧಾನಗಳಿವೆ. ಒಂದು ವೇಳೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿದರೆ ವಿಶ್ವದಾದ್ಯಂತ ಮಾನವೀಯತೆಯ ಬಿಕ್ಕಟ್ಟು ಉದ್ಭವಿಸಲಿದೆ ಎಂದು ಹೇಳಿದ್ದಾರೆ.