More

    ಈದ್​ ಮೆರವಣಿಗೆ ವೇಳೆ ಆಕ್ಷೇಪಾರ್ಹ ಘೋಷಣೆ; 20 ಮಂದಿ ಅರೆಸ್ಟ್

    ಅಹಮದಾಬಾದ್: ಈದ್​ ಮೆರವಣಿಗೆಯಲ್ಲಿ ಪೊಲೀಸರ ಎದುರಲ್ಲೇ ಸರ್​ ತಾನ್​ ಸೇ ಜುದಾ (ತಲೆ ಕಡಿಯುವುದು) ಘೋಷಣೆಗಳನ್ನು ಕೂಗುತ್ತಾ, ಹಾಡಿಗೆ ಹೆಜ್ಜೆ ಹಾಕಿರುವ ಘಟನೆ ಗುಜರಾತ್​ನ​ ವಡೋದರಾದಲ್ಲಿ ನಡೆದಿದೆ.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪ್ರಕರಣ ಸಂಬಂಧ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಸೆಪ್ಟೆಂಬರ್​ 29ರಂದು ನಡೆದ ಈದ್​ ಮೆರವಣಿಗೆ ವೇಳೆ ಬಂಧಿತ ಆರೋಪಿಗಳು ಘೋಷಣೆಗಳನ್ನು ಕೂಗುತ್ತ, ಡಿಜೆಯಲ್ಲಿ ಜೋರಾಗಿ ಆಕ್ಷೇಪಾರ್ಹ ಹಾಡುಗಳನ್ನು ಹಾಕುವ ಮೂಲಕ ಉದ್ದಟತನ ಮೆರೆದಿದ್ದಾರೆ. ಘಟನೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಆರೋಪಿಗಳು ತಲೆಮಾರಿಸಿಕೊಂಡಿದ್ದರು.

    ಇದನ್ನೂ ಓದಿ: ಪ್ರಶ್ನೆ ಕೇಳಿದ ವರದಿಗಾರ್ತಿ ಮೇಲೆ ಸಿಟ್ಟಾದ ಅಣ್ಣಾಮಲೈ; ವ್ಯಾಪಕ ಖಂಡನೆ

    ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ 20 ಮಂದಿಯನ್ನು ಅರೆಸ್ಟ್​ ಮಾಡಲಾಗಿದ್ದು, ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ (IPC Section) 153A,153B,188,114,GP Act Sections 131,135 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು, ಇಂತಹ ಸಮಾಜ ವಿರೋಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಹಾಳುಗೆಡವಲು ಮುಂದಾಗಿರುವ ಇಂತಹವರನ್ನು ದೇಶದಿಂದಲ್ಲೇ ಗಡಿಪಾರು ಮಾಡಿ ಎಂದು ಹಲವರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts