ನ್ಯೂಸ್

ಧರ್ಮೇಂದ್ರರ ಈ ಮೂರು ಸಿನಿಮಾ ರಿಮೇಕ್​ ಮಾಡುವ ಆಸೆ; ಬಾಲಿವುಡ್​ ಭಾಯಿಜಾನ್​ ಹೇಳಿದ ಚಿತ್ರಗಳಿವು | Salman Khan

ಮುಂಬೈ: ಬಾಲಿವುಡ್ ಭಾಯಿಜಾನ್​​​ ನಟ ಸಲ್ಮಾನ್ ಖಾನ್(Salman Khan) ಅವರ ಬಹುನಿರೀಕ್ಷಿತ ಚಿತ್ರ ಸಿಕಂದರ್ ಬಿಡುಗಡೆಯಾಗಿದೆ. ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಪ್ರಚಾರದ ವೇಳೆ ಹಮದ್ ಅಲ್ ರಿಯಾಮಿ ಅವರೊಂದಿಗಿನ ಸಂದರ್ಶನದಲ್ಲಿ ಸಲ್ಮಾನ್ ಖಾನ್​​, ಧರ್ಮೇಂದ್ರ ಮತ್ತು ಅವರ ಪುತ್ರರೊಂದಿಗಿನ ತಮ್ಮ ಸಂಬಂಧ ಹೇಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಧರ್ಮೇಂದ್ರ ಅವರ ಮೂರು ಚಲನಚಿತ್ರಗಳನ್ನು ರೀಮೇಕ್ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ.

ಸಂದರ್ಶನದಲ್ಲಿ ಧರ್ಮೇಂದ್ರ ಅವರ ಬಗ್ಗೆ ಮಾತನಾಡಿದ ಸಲ್ಮಾನ್​ ಖಾನ್​​, ಅವರು ಉದ್ಯಮದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ವಾಸ್ತವವಾಗಿ ನನ್ನ ತಂದೆಯ ನಂತರ ನನ್ನ ವೃತ್ತಿಜೀವನದುದ್ದಕ್ಕೂ ನಾನು ಧರಂ ಜಿ ಅವರನ್ನು ಮಾತ್ರ ಅನುಸರಿಸಿದ್ದೇನೆ. ಅವರ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನಾನು ಅವರನ್ನು ಅನುಸರಿಸುತ್ತೇನೆ ಎಂದು ಹೇಳಿದರು.

ಇದೇ ಸಮಯದಲ್ಲಿ ಭಾಯಿಜಾನ್​ ಬಳಿ ಧರ್ಮೇಂದ್ರ ಅವರ ಯಾವ ಸಿನಿಮಾಗಳನ್ನು ರಿಮೇಕ್ ಮಾಡಲು ಬಯಸುತ್ತೀರಿ ಎಂದು ಕೇಳಿದಾಗ, ನಾನು ಅವರ 3-4 ಸಿನಿಮಾಗಳನ್ನು ( ಧರ್ಮೇಂದ್ರ ಸಿನಿಮಾಗಳು ) ರಿಮೇಕ್ ಮಾಡುತ್ತೇನೆ. ಅವರ ಒಂದು ಸಿನಿಮಾ 'ಚಾಚಾ ಭತಿಜಾ' ಮತ್ತ ಸೀತಾ ಔರ್ ಗೀತಾವನ್ನು ರಿಮೇಕ್ ಮಾಡುತ್ತೇನೆ. ಖಂಡಿತವಾಗಿಯೂ ಶೋಲೆ ರಿಮೇಕ್​​ ಮಾಡುವೆ, ಅವರ 'ರಾಮ್ ಬಲರಾಮ್' ಸಿನಿಮಾ.. ಅವರ ಹಲವು ಸಿನಿಮಾಗಳಿವೆ, ನಾನು ಅವರ ಪ್ರತಿಯೊಂದು ಸಿನಿಮಾವನ್ನೂ ನೋಡಿದ್ದೇನೆ ಎಂದು ಹೇಳಿದರು.

ಸಲ್ಮಾನ್, ಧರ್ಮೇಂದ್ರ ಮತ್ತು ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಇತ್ತೀಚೆಗೆ ಸಿಕಂದರ್ ಬಿಡುಗಡೆಗೂ ಮುನ್ನ ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಅವರ ಚಿತ್ರದ ಪೋಸ್ಟರ್​ ಅನ್ನು ಹಂಚಿಕೊಂಡು, ನನ್ನ ಪ್ರೀತಿಯ ಸಲ್ಮಾನ್ ಖಾನ್ ಸಿಕಂದರ್ ಬಿಡುಗಡೆಗೆ ಶುಭಾಶಯಗಳು ಎಂದು ಬರೆದು ಶುಭ ಹಾರೈಸಿದರು. ಸಲ್ಮಾನ್ ಖಾನ್ ಮುಂದೆ 'ಕಿಕ್ 2' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ಜತೆ ಮತ್ತೊಂದು ಆಕ್ಷನ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.(ಏಜೆನ್ಸೀಸ್​​)\