ಬೆಂಗಳೂರು: ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷ್ನಲ್ಲಿ ತಯಾರಾಗಿರುವ 'ಸಲಾರ್' ಚಿತ್ರವು ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದಂದು ಬಿಡುಗಡೆಯಾಗುವುದು ಅನುಮಾನ ಎಂದು ಇತ್ತೀಚಿನ ವರದಿ ತಿಳಿಸಿದೆ.
ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಸಲಾರ್' ಬಗ್ಗೆ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರವನ್ನು ಸೆಪ್ಟಂಬರ್ 28 ರಂದು ರಿಲೀಸ್ ಮಾಡಲಿದ್ದೇವೆ ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿತ್ತು. ಆದ್ರೆ, ಚಿತ್ರ ತಯಾರಕರು ಇದೀಗ ಸಿನಿಮಾವನ್ನು ನಿಗದಿಪಡಿಸಲಾಗಿದ್ದ ದಿನದಂದು ಬಿಡುಗಡೆಗೊಳಿಸುವುದಯ ಅನುಮಾನ ಎಂದು ಹೇಳಲಾಗಿದೆ. ಇದಕ್ಕೆ ಕಾರಣ ಹೀಗಿದೆ.
ಚಿತ್ರದ ಕೆಲವು ನಿರ್ಣಾಯಕ ವಿಎಫ್ಎಕ್ಸ್ ಶಾಟ್‌ಗಳ ಗುಣಮಟ್ಟವನ್ನು ಒಪ್ಪದ ನಿರ್ದೇಶಕ ಪ್ರಶಾಂತ್ ನೀಲ್, ಅವುಗಳನ್ನು ರೀ-ವರ್ಕ್ ಮಾಡಲು ಸ್ಟುಡಿಯೋಗೆ ಕಳುಹಿಸಿದ್ದಾರೆ. ಹೀಗಾಗಿ 'ಸಲಾರ್' ಸೆಪ್ಟಂಬರ್ 28 ರಂದು ರಿಲೀಸ್ ಆಗದೆ ಮುಂದೂಡಿಕೆಯಾಗಬಹುದು. ಸದ್ಯದ ಮಾಹಿತಿ ಪ್ರಕಾರ, ಚಿತ್ರವನ್ನು ಡಿಸೆಂಬರ್ಗೆ ಮುಂದೂಡಲು ಚಿತ್ರತಂಡ ಚಿಂತಿಸಿದೆ ಎಂದು ಹೇಳಲಾಗಿದೆ.
'ಸಲಾರ್' ಟ್ರೇಲರ್ ಸೆ. 06 ರಂದು ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದ್ರೆ, ಇದು ಕೂಡ ಈಗ ತಾಂತ್ರಿಕ ಕೆಲಸಗಳಿಂದ ಮುಂದೋಗಿದೆ. ಟ್ರೇಲರ್ಗಾಗಿ ಕಾತರದಿಂದ ಕಾಯುತ್ತಿದ್ದ ಪ್ರಭಾಸ್ ಅಭಿಮಾನಿಗಳಿಗೆ ಶೀಘ್ರವೇ ಚಿತ್ರತಂಡ ಹೊಸ ಮಾಹಿತಿಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂಬ ನಿರೀಕ್ಷೆಯಿದೆ.
ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ಸರಣ್ ಶಕ್ತಿ, ಈಶ್ವರಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).