ನ್ಯೂಸ್

ಪವನ್ ಕಲ್ಯಾಣ್, ಪ್ರಭಾಸ್​ಗೆ ಸಂಭಾವನೆ ಕೊಡುವಷ್ಟು ಹಣ ನನ್ನ ಬಳಿ ಇಲ್ಲ; ಸಿನಿಮಾ ನಿರ್ಮಾಣ ಮಾಡ್ತಾರಾ ಧೋನಿ ಪತ್ನಿ?

ಹೈದರಬಾದ್​​: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಎಂಬ ನಿರ್ಮಾಣ ಕಂಪನಿಯನ್ನು ಸ್ಥಾಪಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಗೊತ್ತೇ ಇದೆ. ಅವರ ಪತ್ನಿ ಸಾಕ್ಷಿ ಈ ಪ್ರೊಡಕ್ಷನ್ ಹೌಸ್‌ ನೋಡಿಕೊಳ್ಳುತ್ತಿದ್ದಾರೆ.

ಈ ನಿರ್ಮಾಣ ಸಂಸ್ಥೆಯ ಮೊದಲ ಪ್ರಾಜೆಕ್ಟ್, LGM ಎಂಬ ತಮಿಳು ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾಲಿವುಡ್ ಯಂಗ್ ಹೀರೋ ಹರೀಶ್ ಕಲ್ಯಾಣ್ ಮತ್ತು ಲವ್ ಟುಡೇ ಸಿನಿಮಾ ಖ್ಯಾತಿಯ ಇವಾನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಫ್ಯಾಮಿಲಿ, ಕಾಮಿಡಿ ಎಂಟರ್​​​ಟೈನರ್ ಆಗಿ ಮೂಡಿಬರಲಿದೆ. ಈ ಸಿನಿಮಾ ತಮಿಳು ಜತೆಗೆ ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ.

ಹೈದರಾಬಾದ್​​ನಲ್ಲಿ ‘ಎಲ್​ಜಿಎಂ’ ಸಿನಿಮಾದ ಪ್ರಮೋಷನ್​ ವೇಳೆ ಮಾತನಾಡಿದ ಸಾಕ್ಷಿ, ಅಲ್ಲು ಅರ್ಜುನ್ ಅವರ ನಟನೆ ಎಂದರೆ ನನಗೆ ಇಷ್ಟ ಎಂದು ಹೇಳಿದ್ದಾರೆ. ಪತ್ರಕರ್ತರೊಬ್ಬರು ಸಾಕ್ಷಿಯನ್ನು ಪ್ರಶ್ನಿಸಿದರು..'ಪವನ್ ಕಲ್ಯಾಣ್ ಮತ್ತು ಪ್ರಭಾಸ್ ಅವರಂತಹ ಟಾಲಿವುಡ್ ಸ್ಟಾರ್‌ ಜತೆಗೆ ಸಿನಿಮಾ ಮಾಡುತ್ತೀರಾ?' ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಾಕ್ಷಿ.. “ಇಬ್ಬರೂ ದೊಡ್ಡ ಸ್ಟಾರ್‌ಗಳು. ನಾನಿನ್ನೂ ಆರಂಭಿಕ ಹಂತದಲ್ಲಿದ್ದೇನೆ. ಪವನ್ ಕಲ್ಯಾಣ್ ಮತ್ತು ಪ್ರಭಾಸ್​​​ ಅವರಿಗೆ ಸಂಭಾವನೆ ಕೊಡುವಷ್ಟು ಹಣ ನನ್ನ ಬಳಿ ಇಲ್ಲ ಎಂದಿದ್ದಾರೆ.

ಮತ್ತೊಬ್ಬ ವರದಿಗಾರ, 'ಧೋನಿ ಅವರು ನಾಯಕನಾಗಿ ಸಿನಿಮಾ ಮಾಡುವ ಸಾಧ್ಯತೆ ಇದೆಯೇ?'  ಸಾಕ್ಷಿ , “ಏನೋ ಆಗಬಹುದು. ನಾನು ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ.