ನ್ಯೂಸ್

ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ: ಜುಲೈ 17ರಿಂದ ಐದು ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ದೇಗುಲದ ಆಡಳಿತ ಒಂದು ಸಿಹಿ ಸುದ್ದಿ ಕೊಟ್ಟಿದೆ. ಮಾಸಿಕ ಪೂಜೆಗಳ ಪ್ರಯುಕ್ತ ದೇವಸ್ಥಾನವನ್ನು ಐದು ದಿನಗಳ ಕಾಲ ಭಕ್ತಾದಿಗಳಿಗೆ ಮುಕ್ತವಾಗಿಸುವುದಾಗಿ ಹೇಳಲಾಗಿದೆ.

ಜುಲೈ 17ರಿಂದ ಜುಲೈ 21ರವರೆಗೆ ಅಯ್ಯಪ್ಪ ಸ್ವಾಮಿ ದೇವಾಯಲ ತೆರೆದಿರಲಿದೆ. 48 ಗಂಟೆಗಳ ಅವಧಿಯಲ್ಲಿ ಕರೊನಾ ನೆಗೆಟಿವ್ ಬಂದಿರುವ ವರದಿ ಇರುವ ಭಕ್ತಾದಿಗಳು ಮತ್ತು ಸಂಪೂರ್ಣ ಕರೊನಾ ಲಸಿಕೆ ಪಡೆದಿರುವ ಭಕ್ತಾದಿಗಳಿಗೆ ಮಾತ್ರ ದೇವರ ದರ್ಶನ ಪಡೆಯಲು ಅವಕಾಶವಿರಲಿದೆ ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ.

ಪ್ರತಿದಿನ ಗರಿಷ್ಠ 5 ಸಾವಿರ ಭಕ್ತಾದಿಗಳು ದೇವರ ದರ್ಶನ ಪಡೆಯಬಹುದು. ಆನ್​ಲೈನ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಈ ಅವಕಾಶ ಸಿಗಲಿದೆ. ದೇವಸ್ಥಾನದ ಆವರಣದಲ್ಲಿ ಮಾಸ್ಕ್ ಹಾಕಿಕೊಳ್ಳುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)