ನ್ಯೂಸ್

ಮಾತುಮಾತಿಗೂ ಕೇಸ್‌ ಹಾಕಿ ಪಾಪರ್‌ ಮಾಡ್ತೇನೆ ಎಂತಿದ್ದಾಳೆ ಹೆಂಡ್ತಿ: ಅವಳ ವಿರುದ್ಧ ನಾನು ಏನು ಮಾಡಬಹುದು?

ನನ್ನ ಹೆಂಡತಿ ನನ್ನ ಮೇಲೆ ಎರಡುಮೂರು ಕೇಸು ಹಾಕುತ್ತೇನೆ ಎನ್ನುತ್ತಿದ್ದಾಳೆ. ಎಲ್ಲ ಕೇಸಿನಲ್ಲಿಯೂ ಜೀವನಾಂಶ ಕೇಳಿ, ನಿನ್ನನ್ನು ಪಾಪರ್‌ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾಳೆ. ಹಾಗೆ ಅವಳು ಕೇಸು ಹಾಕುವುದನ್ನು ತಡೆಯಲು ಆಗುತ್ತದೆಯೇ? ಅವಳು ಕೇಸು ಹಾಕಬಾರದೆಂದು ನಾನು ಕೇಸು ಹಾಕ ಬಹುದೇ?

ಉತ್ತರ: ನಿಮ್ಮ ಮೇಲೆ ನಿಮ್ಮ ಪತ್ನಿ ಯಾವುದೇ ಕೇಸು ಹಾಕಬಾರದು ಎಂದು ಕೋರಿ ನೀವು ಕೇಸು ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಆಕೆ ಕೇಸು ಹಾಕಿದರೆ , ಆ ಕೇಸಿನಲ್ಲಿ ಆಕೆ ಕೇಳಿರುವ ಪರಿಹಾರವನ್ನು ಕಾನೂನಿನ ಪ್ರಕಾರ ಕೊಡಬಹುದೇ ಇಲ್ಲವೇ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ನಿಮ್ಮ ಆಕ್ಷೇಪಣೆಗಳನ್ನು ನೀವು ನ್ಯಾಯಾಲಯಕ್ಕೆ ಸಲ್ಲಿಸಬಹುದು.

ನಿಮ್ಮ ಪತ್ನಿ ನಿಮ್ಮ ಮೇಲೆ ಎರಡು ಮೂರು ಪ್ರಕರಣಗಳನ್ನು ಹಾಕಿ, ಎಲ್ಲದರಲ್ಲಿಯೂ ಜೀವನಾಂಶ ಕೇಳಿದರೆ ನೀವು ಹೆದರಬೇಕಾಗಿಲ್ಲ. ಒಂದು ಕೇಸಿನಲ್ಲಿ ಆದ ಆದೇಶವನ್ನು ಮತ್ತೊಂದು ಕೇಸಿನಲ್ಲಿ ಗಮನಕ್ಕೆ ಆಕೆ ತರಲೇ ಬೇಕು. ಇಲ್ಲದಿದ್ದರೆ ನೀವಾದರೂ ನ್ಯಾಯಾಲಯದ ಗಮನಕ್ಕೆ ತರಬಹುದು.

ಮೂರು ಕೇಸು ಹಾಕಿದರೂ, ಒಂದು ಕೇಸು ಹಾಕಿದರೂ, ಎಷ್ಟು ಜೀವನಾಂಶ ಕೊಡಬೇಕು ಎನ್ನುವುದು, ನಿಮ್ಮ ಗಳಿಕೆಯ ಮೇಲೆ ಮತ್ತು ಆಕೆಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇದೆಯೋ ಇಲ್ಲವೋ ಎನ್ನುವುದರ ಮೇಲೆ ಮಾತ್ರ ಆಧಾರ ಪಟ್ಟಿರುತ್ತದೆ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ: