ನ್ಯೂಸ್

ಜರ್ನಲಿಸಂ ಪದವೀಧರರಿಗೆ ದೂರದರ್ಶನದಲ್ಲಿ ಉದ್ಯೋಗಕ್ಕೆ ಅವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

suchetana

ಪ್ರಸಾರ ಭಾರತಿ ಅಧೀನದಲ್ಲಿ ಕಾರ್ಯನಿರ್ವಹಿಸುವ ದೆಹಲಿಯಲ್ಲಿರುವ ದೂರದರ್ಶನ್ ನ್ಯೂಸ್ 24X7 ಇಂಗ್ಲಿಷ್ ನ್ಯೂಸ್ ಚಾನೆಲ್‍ಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೇತನವನ್ನು ಸಂದರ್ಶನ ಸಮಯದಲ್ಲಿ ಚರ್ಚೆ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟು ಹುದ್ದೆಗಳು: 21

ಹುದ್ದೆ ವಿವರ

* ಅಸೈನ್‍ಮೆಂಟ್ ಕೋ-ಆರ್ಡಿನೇಟರ್ - 4

* ಬ್ರಾಡ್‍ಕಾಸ್ಟ್ ಎಕ್ಸಿಕ್ಯೂಟೀವ್ ಗ್ರೇಡ್1 - 5

* ಕಾಪಿ ರೈಟರ್ ಗ್ರೇಡ್2 - 4

* ಗೆಸ್ಟ್ ಕೋ-ಆರ್ಡಿನೇಟರ್ ಗ್ರೇಡ್1 - 1

* ಗೆಸ್ಟ್ ಕೋ-ಆರ್ಡಿನೇಟರ್ ಗ್ರೇಡ್2 - 1

ಶೈಕ್ಷಣಿಕ ಅರ್ಹತೆ: ಮಾಸ್‍ಕಮ್ಯುನಿಕೇಷನ್/ ಜರ್ನಲಿಸಂ, ರೇಡಿಯೋ, ಟಿವಿ ಪ್ರೊಡಕ್ಷನ್, ಪಬ್ಲಿಕ್ ರಿಲೇಷನ್‍ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೋಮಾ ಮಾಡಿದ್ದು, ಇಂಗ್ಲಿಷ್ ಭಾಷಾ ಜ್ಞಾನ ಹಾಗೂ ವೃತ್ತಿ ಅನುಭವ ಅವಶ್ಯ.

ವಯೋಮಿತಿ: 20.4.2021ಕ್ಕೆ ಅನ್ವಯವಾಗುವಂತೆ ಗೆಸ್ಟ್ ಕೋ-ಆರ್ಡಿನೇಟರ್ ಹುದ್ದೆಗೆ ಗರಿಷ್ಠ 45 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಡಿಡಿ ರೂಪದಲ್ಲಿ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 20.4.2021

ಅರ್ಜಿ ಸಲ್ಲಿಕೆ ವಿಳಾಸ: Deputy Director (HR), Room No. 413, 4h Floor, Doordarshan Bhawan, Tower-B. Copernicus Marg. New Delhi - 110001.

ಅಧಿಸೂಚನೆಗೆ: https://bit.ly/3wDIfuY

ಮಾಹಿತಿಗೆ: https://prasarbharati.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: