ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಹೈದರಾಬಾದ್ನಲ್ಲಿರುವ ಇಸಿಐಎಲ್ನ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಸರ್ವಿಸಸ್ ಡಿವಿಷನ್ (ಇಎಂಎಸ್ಡಿ) ಹಾಗೂ ದೇಶಾದ್ಯಂತ ಇರುವ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ತಾಂತ್ರಿಕ ಅಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಹುದ್ದೆಗಳು: 300
ಇಸಿಐಎಲ್ನಲ್ಲಿರುವ ಟೆಕ್ನಿಕಲ್ ಆಫೀಸರ್ ಹುದ್ದೆಯು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಅಗತ್ಯತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು.
ಈ ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 136 ಸ್ಥಾನ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 50, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 77, ಎಸ್ಸಿಗೆ 50, ಎಸ್ಟಿಗೆ 22 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವ ಭಾಗದಲ್ಲಾದರೂ ನೇಮಕ ಮಾಡಬಹುದು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಕೆಟಗರಿಯಲ್ಲಿ ಅರ್ಜಿ ಸಲ್ಲಿಸದಂತೆ ಸೂಚಿಸಲಾಗಿದೆ.
ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ಟ್ರುಮೆಂಟೇಷನ್/ ಕಂಪ್ಯೂಟರ್ ಸೈನ್ಸ್/ ಇನ್ಫಮೇಷನ್ ಟೆಕ್ನಾಲಜಿ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.50 ಅಂಕ ಪಡೆದಿರಬೇಕು. ಅಂಗವಿಕಲ ಅಭ್ಯರ್ಥಿಗಳು ಶೇ.40 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು.
ವಯೋಮಿತಿ: 31.12.2020ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಮೊದಲ ವರ್ಷ ಮಾಸಿಕ 25,000 ರೂ., 2ನೇ ವರ್ಷ 28,000 ರೂ., 3-5ನೇ ವರ್ಷಕ್ಕೆ 31,000 ರೂ. ವೇತನ ಇದೆ. ಟಿಎ/ ಡಿಎ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು. ಶದಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪಟ್ಟಿ, ದಾಖಲೆ ಪರಿಶೀಲನೆಯ ಸ್ಥಳ, ಸಮಯದ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 21.12.2021
ಅಧಿಸೂಚನೆಗೆ: https://bit.ly/3GGZG1N
ಮಾಹಿತಿಗೆ: http://www.ecil.co.in