ನ್ಯೂಸ್

ನಾನು ಶ್ಯೂರಿಟಿ ಹಾಕಿದ ಸಾಲಗಾರ ಹಣ ಪಾವತಿಸದೇ ಮೃತಪಟ್ಟರೆ ಕಾನೂನಿನಡಿ ಏನು ಪರಿಹಾರವಿದೆ?

ನಾನು ಒಬ್ಬರಿಗೆ ಸೊಸೈಟಿಯಲ್ಲಿ ಎರಡು ಲಕ್ಷ ಸಾಲಕ್ಕೆ ಶೂರಿಟಿ ಹಾಕಿದ್ದೆ, ಅವರು ಈಗ ತೀರಿಕೊಂಡಿದ್ದಾರೆ. ಅವರ ಪತ್ನಿ ಮತ್ತು ಕುಟುಂಬದವರಿಗೆ ಇವರ ಸಾಲದ ಬಗ್ಗೆ ಅರಿವಿಲ್ಲ. ಮೃತಪಟ್ಟವರಿಗೆ ಏನೇನು ಸೌಲಭ್ಯ ( ಎಲ್‌.ಐ.ಸಿ, ಆಸ್ತಿ-ಪಾಸ್ತ, ಇತರ ಸಾಲದ ವಿವರ ಇತ್ಯಾದಿ) ಇದೆ ಎಂದು ನಮಗೆ ಗೊತ್ತಿಲ್ಲ. ಸಾಲದ ಹಣ ಸಂದಾಯ ಮಾಡದೇ ಮೃತಪಟ್ಟರೂ , ಶ್ಯೂರಿಟಿ ಹಾಕಿದವರೇ ಹೊಣೆಗಾರರಾಗುತ್ತಾರೆಯೇ? ಇದಕ್ಕೆ ಬೇರೆ ದಾರಿ ಇಲ್ಲವೇ?

ಉತ್ತರ: ನೀವು ಹೆದರಿಕೊಳ್ಳಬೇಡಿ. ಸಾಲ ಕೊಟ್ಟವರು, ಸಾಲ ಪಡೆದವರ ಮೇಲೆ ಮತ್ತು ಶೂರಿಟಿ ಹಾಕಿವರ ಮೇಲೆ, ಇಬ್ಬರನ್ನೂ ಸೇರಿಸಿ ದಾವೆ ಸಲ್ಲಿಸುತ್ತಾರೆ. ಸಾಲ ಪಡೆದವರು ಮೃತರಾಗಿರುವುದರಿಂದ ಅವರ ವಾರಸುದಾರರ ಮೇಲೆ ಮತ್ತು ನಿಮ್ಮ ಮೇಲೆ ವಸೂಲಾತಿಗೆ ದಾವೆ ಹಾಕಬಹುದು. ನೀವು , ಮೃತರಿಗೆ ಇರುವ ಚರ ಸ್ಥಿರ ಆಸ್ತಪಾಸ್ತಿಗಳ ವಿವರವನ್ನು ಕಲೆ ಹಾಕಿ.

ಕಾನೂನಿನ ಪ್ರಕಾರ, ಸಾಲ ಕೊಟ್ಟವರು ಶ್ಯೂರಿಟಿ ಆಗಿರುವ ನಿಮ್ಮಿಂದ ಸಾಲ ವಾಪಸ್‌ ಪಡೆದರೂ, ನೀವು ಶ್ಯೂರಿಟಿ ಹಾಕಿರುವ ವ್ಯಕ್ತಿಯ ಆಸ್ತಿ ಪಾಸ್ತಿಗಳ ಮೂಲಕ ನಿಮ್ಮ ಕೈಯಿಂದ ಹೋದ ಹಣವನ್ನು ವಾಪಸ್‌ ಪಡೆಯಬಹುದು. ಸೊಸೈಟಿಯವರಿಗೆ ತಿಳಿಸಿ, ಮೃತರ ಆಸ್ತಿ ಪಾಸ್ತಿಗಳ ವಿವರ ಪಡೆಯಲು ಕೇಳಿಕೊಳ್ಳಿ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/