ಕಾಬೂಲ್: ಸುಪ್ರೀಂಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಫಘಾನ್ ಮಹಿಳಾ ನ್ಯಾಯಮೂರ್ತಿಗಳನ್ನು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿರುವ ಭಯಾನಕ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.
ತಾಲಿಬಾನ್ ಮತ್ತು ಸರ್ಕಾರದ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನದಾದ್ಯಂತ ಹಿಂಸಾಚಾರ ಹೆಚ್ಚಾಗಿದ್ದು, ಇದು ನ್ಯಾಯಮೂರ್ತಿಗಳನ್ನೇ ಹತ್ಯೆ ಮಾಡಲಾಗಿದೆ.
ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ವಿಶೇಷವಾಗಿ ಕಾಬೂಲ್‌ನಲ್ಲಿ, ಉನ್ನತ ಮಟ್ಟದ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಾಳಿಯು ಪೆಂಟಗನ್ ಅಫ್ಘಾನಿಸ್ತಾನದಲ್ಲಿ ಸೈನ್ಯದ ಮಟ್ಟವನ್ನು 2,500 ಕ್ಕೆ ಇಳಿಸಿದೆ ಎಂದು ಘೋಷಿಸಿದ ಎರಡು ದಿನಗಳ ನಂತರ ಬಂದಿದೆ, ಇದು ಸುಮಾರು ಎರಡು ದಶಕಗಳಲ್ಲಿ ಕಡಿಮೆ.
ನ್ಯಾಯಾಲಯದ ವಾಹನದಲ್ಲಿ ತಮ್ಮ ಕಚೇರಿಗೆ ಹೋಗುತ್ತಿದ್ದ ಸಮಯದಲ್ಲಿ ಅವರ ಮೇಲೆ ಹಲ್ಲೆ ನಡೆಸಿರುವ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ವಕ್ತಾರ ಅಹ್ಮದ್ ಫಾಹಿಮ್ ಖವೀಮ್ ಹೇಳಿದ್ದಾರೆ.
ಇಲ್ಲಿಯ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳು ಸೇರಿದಂತೆ ವಿವಿಧ ಉನ್ನತ ಹುದ್ದೆಗಳಿಗೆ 200ಕ್ಕೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದೀಗ ಮಹಿಳೆಯರನ್ನೇ ಏಕೆ ಟಾರ್ಗೆಟ್ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆದಿದೆ.
ಉಗ್ರರಿಂದ ಅಫ್ಘಾನಿಸ್ತಾನದ ಕೋರ್ಟ್ ಮೇಲೆ ದಾಳಿ ಮಾಡಿರುವುದು ಇದೇ ಮೊದಲಲ್ಲ. 2017ರ ಫೆಬ್ರುವರಿಯಲ್ಲಿ ನ್ಯಾಯಾಲಯದ ನೌಕರರ ಗುಂಪಿನಲ್ಲಿ ಸೇರಿಕೊಂಡು ಆತ್ಮಾಹುತಿ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 20ಕ್ಕೂ ಅಧಿಕ ನೌಕರರು ಮೃತಪಟ್ಟಿದ್ದರು. 50ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದವು.
ಅಫಘಾನ್ ಅಧಿಕಾರಿಗಳು ಈ ದಾಳಿಗೆ ತಾಲಿಬಾನ್ ಅನ್ನು ದೂಷಿಸಿದ್ದಾರೆ, ಆದರೆ ತಾಲಿಬಾನ್ ಇದನ್ನು ನಿರಾಕರಿಸಿದೆ.