ನ್ಯೂಸ್

ಕೊವ್ಯಾಕ್ಸಿನ್‌ ತಯಾರಿಸಲು ನವಜಾತ ಕರುವಿನ ರಕ್ತದ ಸಾರ! ತಜ್ಞರು ಏನು ಹೇಳಿದ್ದಾರೆ ಕೇಳಿ...

ನವದೆಹಲಿ: ನವಜಾತ ಕರುವಿನ ಸೀರಮ್ (ರಕ್ತದಿಂದ ಸಂಗ್ರಹಿಸಿದ ಸಾರ) ಅನ್ನು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ತಯಾರಿಸಲು ಬಳಸಲಾಗಿದೆಯೇ?

ಹೀಗೊಂದು ಪ್ರಶ್ನೆಯನ್ನು ಸಲ್ಲಿಸಿ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿರುವ ಅರ್ಜಿಯಲ್ಲಿ ಈ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ವಿಕಾಸ್ ಪಟ್ನಿ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಈ ಉತ್ತರ ಬಂದಿದ್ದು, ಸೀರಂ ಅನ್ನು ಕೋವ್ಯಾಕ್ಸಿನ್ ತಯಾರಿಕೆಯ ಸಮಯದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಎಂದು ಭಾರತ್ ಬಯೋಟೆಕ್ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಹೇಳಿದ್ದು, ಇದು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಲಸಿಕೆ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತದೆ, ಇದೇನೂ ಹೊಸತಲ್ಲ ಎಂದು ಮಾಹಿತಿ ನೀಡಿದೆ.

"ಸೀರಂ ಬಳಕೆಯ ಕುರಿತು ಸ್ಪಷ್ಟನೆ ನೀಡಿರುವ ತಜ್ಞರು, ನವಜಾತ ಕರುವಿನ ರಕ್ತದಿಂದ ಸಂಗ್ರಹಿಸಿದ ಸಾರವನ್ನು ನೇರವಾಗಿ ಲಸಿಕೆ ತಯಾರಿಸಲು ಬಳಸುವುದಿಲ್ಲ. ಬದಲಿಗೆ ಲಸಿಕೆ ತಯಾರು ಮಾಡುವಾಗ ಇದನ್ನು ಮಾಧ್ಯಮವಾಗಿ (ಏಜೆಂಟ್‌) ಬಳಕೆ ಮಾಡಲಾಗುತ್ತದೆ. ನಂತರ ಅದನ್ನು ಶುದ್ಧೀಕರಿಸಿ, ಕೋಶದ ರೂಪದಲ್ಲಿ ಪರೋಕ್ಷವಾಗಿ ಲಸಿಕೆ ತಯಾರಿಕೆಗೆ ಬಳಲಾಗುತ್ತದೆ. ಪೋಲಿಯೊ ಲಸಿಕೆ ತಯಾರಿಕೆಯಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ. ಇದನ್ನು ಭಾರತದ ಎಲ್ಲಾ ಲಸಿಕೆ ತಯಾರಕರು ಬಳಸುತ್ತಾರೆ ಎಂದಿದ್ದಾರೆ.

ಹಾಗಿದ್ದರೆ ಕರುವನ್ನು ಸಾಯಿಸಿ ಇದನ್ನು ಪಡೆಯಲಾಗುತ್ತದೆಯೇ ಎಂಬ ಪ್ರಶ್ನೆಗೂ ಉತ್ತರಿಸಿರುವ ಅವರು, ಜೀವಂತ ಆರೋಗ್ಯಕರ ಕರುವಿನಿಂದಲೇ ಸೀರಂ ಸಂಗ್ರಹ ಮಾಡಲಾಗುತ್ತದೆ, ಇಲ್ಲವೇ ಭಾರತದ ಹೊರಗಿನಿಂದ ಕಸಾಯಿಖಾನೆಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಗೋಮೂತ್ರ, ಕುದುರೆಯ ಸಂಗ್ರಹಿಸಿದ ರಕ್ತದ ಕಣ ಮಾತ್ರವಲ್ಲದೇ ಮನುಷ್ಯರ ಮಲದಿಂದ ಸಂಗ್ರಹಿಸಿದ ಸಾರವನ್ನೂ ಔಷಧಗಳಲ್ಲಿ ಹಾಗೂ ಮಾತ್ರೆಗಳಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಇವುಗಳ ತಯಾರಿಕೆ ಕುರಿತಂತೆ ಜನಸಾಮಾನ್ಯರು ತಿಳಿದುಕೊಳ್ಳದಿರುವುದೇ ಒಳಿತು ಎನ್ನುವುದು ಕೆಲವು ತಜ್ಞರ ಅಭಿಮತ.