ನ್ಯೂಸ್

ಲಾಠಿ ಬೀಸಲ್ಲಪ್ಪ.. ಗುಲಾಬಿ ಕೊಡ್ತೀವಿ... ಬೈಕ್‌ ಇಲ್ಲಿ ಕೊಟ್ಟು ಹೂವು ಜತೆ ಮನೆಗೆ ಹೋಗಿ...

ಬೆಂಗಳೂರು: ಬಿಗಿ ಲಾಕ್‌ಡೌನ್‌ ನಡುವೆಯೂ ಅನಗತ್ಯವಾಗಿ ರಸ್ತೆಗೆ ಬರುವವರ ಮೇಲೆ ರಾಜ್ಯಾದ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಾಹನಗಳನ್ನು ಸೀಜ್ ಮಾಡುವುದು ಸಾಮಾನ್ಯವಾಗಿದೆ.

ಕೆಲವು ಕಡೆಗಳಲ್ಲಿ ದಂಡಂ ದಶಗುಣಂ ಎನ್ನುವಂತೆ ಹೊಡೆದು, ಬಡಿದು, ಲಾಠಿ ಪ್ರಹಾರ ಮಾಡಿರುವ ಘಟನೆಗಳು ನಡೆದಿವೆ. ಕೆಲವು ಕಡೆಗಳಲ್ಲಿ ಬಸ್ಕಿ ಹೊಡೆಸಿಯೂ ಆಗಿದೆ. ಆದರೆ ಕೆಲವು ವಿಕೋಪಕ್ಕೆ ಹೋದ ಕಾರಣ ಪೊಲೀಸ್‌ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಲಾಠಿ ಪ್ರಯೋಗ ಮಾಡದಂತೆ ಸರ್ಕಾರ ಸೂಚನೆಯನ್ನು ಕೊಟ್ಟಿದೆ.

ಅದೇ ಕಾರಣಕ್ಕೆ ಇದೀಗ ಬೆಂಗಳೂರಿನ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ. ಹೊಡೆಯಲ್ಲ, ಬಡಿಯಲ್ಲ, ಲಾಠಿ ಪ್ರಯೋಗವೂ ಇಲ್ಲ. ಬದಲಿಗೆ ನಿಯಮ ಉಲ್ಲಂಘನೆ ಮಾಡಿದವರಿಗೆ ಗುಲಾಬಿ ಹೂವನ್ನು ನೀಡುತ್ತಿರುವ ಪೊಲೀಸರು ವಾಹನಗಳನ್ನು ಸೀಜ್‌ ಮಾಡುತ್ತಿದ್ದಾರೆ!

ಬೆಂಗಳೂರಿನ ಪೀಣ್ಯ ಪೊಲೀಸರಿಂದ ಇಂಥದ್ದೊಂದು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನೆಲಗದರನಹಳ್ಳಿ ಸರ್ಕಲ್ ಬಳಿ ಕರೋನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಗುಲಾಬಿ ಹೂ ನೀಡಿ ಅವರ ಬೈಕ್ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.