ನ್ಯೂಸ್

ಎಣ್ಣೆ ಪ್ರಿಯರಿಗೆ ‘ಶುಭ ಮಂಗಳವಾರ’: ಸರ್ಕಾರದಿಂದ ಸಿಕ್ಕಿದೆ ‘ಕಿಕ್‌’ ಏರಿಸುವ ಸುದ್ದಿ

suchetana

ಬೆಂಗಳೂರು: ಲಾಕ್‌ಡೌನ್‌, ಅನ್‌ಲಾಕ್‌ ಏನೇ ಘೋಷಣೆಯಾದರೂ ಹೆಚ್ಚಿನವರ ಮೊದಲ ಪ್ರಶ್ನೆ ಇರುವುದು ಬಾರ್‌ ಓಪನ್‌ ಇರತ್ತಾ ಎನ್ನುವುದು.

ಮದ್ಯದ ಪಾರ್ಸೆಲ್‌ ತೆಗೆದುಕೊಂಡು ಹೋಗಲು ಇಲ್ಲಿಯವರೆಗೆ ಅನುಮತಿ ನೀಡಲಾಗಿದ್ದರೂ ಬಾರ್‌,ಪಬ್‌ಗಳಲ್ಲಿ ಸ್ನೇಹಿತರ ಜತೆ ಕೂತು ನಶೆಯೇರಿಸಿಕೊಳ್ಳಲು ಬಯಸುವ ಕುಡುಕರಿಗೆ ಇದೀಗ ಸಂತೋಷದ ಸುದ್ದಿಯನ್ನು ಸರ್ಕಾರ ನೀಡಿದೆ.

ಅದೇನೆಂದರೆ ಇದೇ ಮಂಗಳವಾರ ಅಂದರೆ ಸೆಪ್ಟೆಂಬರ್ 1ರಿಂದ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಪಬ್ ಓಪನ್ ಮಾಡಲು ಅನುಮತಿ ನೀಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಒಪ್ಪಿಗೆ ಸೂಚಿಸಿದ್ದಾರೆ.ಕಳೆದ ಐದು ತಿಂಗಳುಗಳ ಹಿಂದೆ ಬಂದ್ ಆಗಿದ್ದ ಪಬ್, ಬಾರ್ ಹಾಗೂ ರೆಸ್ಟೊರೆಂಟ್‌ಗಳನ್ನು ತೆರೆಯಲು ಅನುಮತಿ ದೊರೆತಿದೆ.

ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ. ಅದೇನೆಂದರೆ, ಶೇಕಡ 50ರಷ್ಟು ಗ್ರಾಹಕರೊಂದಿಗೆ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಾರ್ ಆ್ಯಂಡ್‌ ರೆಸ್ಟೋರೆಂಟ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಉದಾಹರಣೆಗೆ 4 ಜನ ಕುಳಿತು ಕುಡಿಯುವ ಸ್ಥಳದಲ್ಲಿ ಇನ್ನು ಮುಂದೆ 2 ಮಂದಿ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಉಳಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಲಿದೆ.

ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಕಷ್ಟಪಟ್ಟು, ಪಾರ್ಸೆಲ್ ಮಾತ್ರ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿತ್ತು. ಇನ್ನು ಮುಂದೆ ಆರಾಮವಾಗಿ ಬಾರ್‌ಗಳಲ್ಲಿ ಕುಳಿತು ಕುಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಂತಾಗಿದೆ.

ಸರ್ಕಾರದ ಈ ಆದೇಶದ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಮಾದರಿಯಲ್ಲಿ ಪಬ್, ಬಾರ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಫೈಬರ್ ಗ್ಲಾಸ್ ಅಳವಡಿಸಿ ಪಾರ್ಟೀಷನ್‌ ಮಾಡಿಕೊಳ್ಳಲಾಗುತ್ತಿದೆ.

‌https://www.vijayavani.net/s-nasa-space-x-landing-successfully/