More

    ಭೂಮಿಗೆ ಬಂದಿಳಿದ ಮೊದಲ ಸಿಬ್ಬಂದಿ ಆಕಾಶನೌಕೆ- ಸೌಂದರ್ಯ ಕಣ್ತುಂಬಿಸಿಕೊಳ್ಳಿ…

    ವಾಷಿಂಗ್ಟನ್: ಭೂಮಿಯತ್ತ ಹೊರಟಿದ್ದ ಅಮೆರಿಕದ ಮೊದಲ ಸಿಬ್ಬಂದಿ ಆಕಾಶನೌಕೆ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದೆ.

    ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟಿದ್ದ ಸ್ಪೇಸ್ ಎಕ್ಸ್ ಮತ್ತು ನಾಸಾ ಸಂಯೋಜನೆಯ ಕ್ರೀವ್ ಡ್ರ್ಯಾಗನ್ ಕ್ಯಾಪ್ಸೂಲ್ ಯಶಸ್ವಿಯಾಗಿ ಸಮುದ್ರದಲ್ಲಿ ಲ್ಯಾಂಡಿಂಗ್ ಆಗಿದೆ. ಈ ಮೂಲಕ ಅಮೆರಿಕ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮತ್ತು ಅವರನ್ನು ಮರಳಿ ಕರೆತರುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.

    ಈ ಯೋಜನೆಯು ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿಯಾಗಿ ನಡೆಸಿದ ಯಶಸ್ವಿ ಕಾರ್ಯಾಚರಣೆ ಆಗಿದೆ.

    ಫಾಲ್ಕನ್-9 ನೌಕೆ ಹೊತ್ತು ಸಾಗಿದ್ದ ‘ಕ್ರೀವ್ ಡ್ರ್ಯಾಗನ್ ಕ್ಯಾಪ್ಸೂಲ್’ ಮೇ 30ರಂದು ಅಂತಾರಾಷ್ಟ್ರೀಯ ಬಾಹ್ಯಾಕಾರ ನಿಲ್ದಾಣಕ್ಕೆ ಯಶಸ್ವಿಯಾಗಿ ಲಾಂಚ್ ಆಗಿತ್ತು. ನಾಸಾದ ಗಗನಯಾತ್ರಿಗಳಾದ ರಾಬರ್ಟ್ ಬೆಹ್ನ್ಕೆನ್ ಹಾಗೂ ಡೌಗ್ಲಾಸ್ ಹರ್ಲಿ ಅವರನ್ನು ಹೊತ್ತ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿತು.

    ಈ ಮೂಲಕ, ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಮಹತ್ತರವಾದ ಸಾಧನೆ ಮಾಡಿದ್ದು, ಸ್ಪೇಸ್‌ ಎಕ್ಸ್‌ನ ಫಾಲ್ಕನ್ 9 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ ಎಂದೇ ಬಣ್ಣಿಸಲಾಗಿತ್ತು.

    ಇದೀಗ ಅದು ವಾಪಸ್‌ ಯಶಸ್ವಿಯಾಗಿ ಬಂದಿದೆ. ಭೂಮಿಯತ್ತ ಹೊರಟಿದ್ದ ಅಮೆರಿಕದ ಮೊದಲ ಸಿಬ್ಬಂದಿ ಆಕಾಶನೌಕೆ ಇದಾಗಿದೆ. ಗಲ್ಫ್ ಆಫ್ ಮೆಕ್ಸಿಕೊದ ಸಮುದ್ರದಲ್ಲಿ ಪ್ಯಾರಚೂಟ್ ಮೂಲಕ ಕೆಳಗೆ ಬಿದ್ದಿತು.

    ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಎಂಡೀವರ್ ಫ್ಲೊರಿಡಾದ ಪೆನ್ಸಕೋಲಾಕ್ಕೆ ಮಧ್ಯಾಹ್ನ 2:48 ಕ್ಕೆ ನೀರಿನಲ್ಲಿ ಚಿಮ್ಮಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಒಂದೇ ರಾಕೆಟ್‌ನಲ್ಲಿ ಹೊರಟಿದ್ದ ಗಗನಯಾತ್ರಿಗಳು, ಭೂಕಕ್ಷೆ ಪ್ರವೇಶಿಸುತ್ತಿದ್ದಂತೆ ಕ್ಯಾಪ್ಸೂಲ್‌ ಅನ್ನು ಮುಖ್ಯ ರಾಕೆಟ್‌ನಿಂದ ಬೇರ್ಪಡಿಸಿತು. ನಂತರ ಕ್ಯಾಪ್ಸೂಲ್‌ ಇಂಜಿನ್‌ ಉರಿಸಿ ಸಮುದ್ರ ತೀರಕ್ಕೆ ಸೇರಿತು.
    ಇದು 1975 ರ ಅಪೊಲೊ-ಸೋಯುಜ್ ಕಾರ್ಯಾಚರಣೆಯ ನಂತರ ಯುಎಸ್ ಬಾಹ್ಯಾಕಾಶ ನೌಕೆಗೆ ಮೊದಲ ಬಾರಿಗೆ ನೀರಿಗೆ ಇಳಿಯಿತು. ಈ ನೌಕೆಯಲ್ಲಿ ನಾಸಾ ಸಂಸ್ಥೆಗೆ ಸೇರಿದ ಇಬ್ಬರು ಗಗನಯಾನಿಗಳು ಇದ್ದರು. ರಾಬರ್ಟ್ ಬೆಹ್ನ್ಕೆನ್ ಮತ್ತು ಡೌಗ್ಲಾಸ್ ಹರ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts