ನ್ಯೂಸ್

ಸ್ವಾಧೀನದಲ್ಲಿರುವ ಜಮೀನನ್ನು ಬೇರೆಯವರಿಗೆ ಕ್ರಯ ಮಾಡಿಬಿಟ್ವರೆ ಕಾನೂನಿನ ನೆರವು ಸಿಗುವುದೆ?

ಪ್ರಶ್ನೆ: ನಾವು ಸುಮಾರು 30 ವರ್ಷದ ಹಿಂದೆ ಒಂದು ಗುಂಟೆ ಜಮೀನು ಖರೀದಿ ಮಾಡಿದೆವು. ಅದನ್ನು ಕ್ರಯಮಾಡಿಕೊಳ್ಳಲಿಲ್ಲ. ಆದರೆ 30 ವರ್ಷದಿಂದ ಸ್ವಾಧೀನದಲ್ಲಿ ಇದ್ದೇವೆ.

ಆದರೆ ಈಗ ಅವರು ದುಡ್ಡಿನ ಆಸೆಗೆ ಒಂದು ವಾರದ ಹಿಂದೆ ಬೇರೆಯವರಿಗೆ ಕ್ರಯ ಮಾಡಿಬಿಟ್ಟಿದಾರೆ. ನಮ್ಮ ಬಳಿ ಯಾವುದೇ ದಾಖಲೆ ಇಲ್ಲ ಅದು ನಮಗೆ ಸಿಗುವುದಿಲ್ಲವೆ?

ಉತ್ತರ: ಕ್ರಯ ಪತ್ರ ಮತ್ತು ರೆವೆನ್ಯೂ ದಾಖಲೆಗಳು ಇಲ್ಲದೇ ಇರುವುದರಿಂದ ನಿಮಗೆ ಕಾನೂನಿನ ಸಹಾಯ ಸಿಗುವುದು ಕಷ್ಟ.

ಎಲ್ಲ ವಿಷಯವನ್ನೂ ವಿವರವಾಗಿ , ವಕೀಲರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಿಳಿಸಿ, “ ಪ್ರತಿಕೂಲ ಸ್ವಾಧೀನತೆಯ” /ಅಡ್ವರ್ಸ್‌ ಪೊಸೆಷನ್‌ ಕಾನೂನಿನ ಸಹಾಯ ಪಡೆಯಬಹುದೇ ಎಂದು ವಿಚಾರಿಸಿ ನೋಡಿ.