ನ್ಯೂಸ್

VIDEO: ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ ‘ಪಾನೀಪುರಿ ಮದುವೆ’- ಮದುಮಗಳಿಗೆ ವಿಶೇಷ ಅಲಂಕಾರ

suchetana

ಕೆಲವರಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಬೇಕು ಎನ್ನುವ ಹಂಬಲ. ಅದಕ್ಕಾಗಿಯೇ ಏನೇನೋ ಸರ್ಕಸ್‌ ಮಾಡುತ್ತಲೇ ಇರುತ್ತಾರೆ. ಇನ್ನು ಕೆಲವರಿಗೆ ವಿಶೇಷವಾಗಿ ಮದುವೆಯಾದರೆ ಪ್ರಸಿದ್ಧರಾಗುತ್ತೇವೆ ಎನ್ನುವುದು ತಿಳಿದೇ ಇರುತ್ತದೆ. ಅಂಥದ್ದೇ ಒಂದು ಮದುವೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದು ಪಾನೀಪುರಿ ಮದುವೆ. ಅದೇನೆಂದರೆ ವಧು ವಿಶೇಷ ರೀತಿಯಲ್ಲಿ ಅಲಂಕಾರಗೊಂಡಿದ್ದಾಳೆ. ಅದೇನೆಂದರೆ ಆಕೆ ಧರಿಸಿರುವ ಕಿರೀಟ ಹಾಗೂ ಹಾಕಿಕೊಂಡಿರುವ ಮಾಲೆ ಎರಡೂ ಪಾನೀಪುರಿಯಲ್ಲಿ ಬಳಸುವ ಪುರಿಯದ್ದು. ಅದೇ ಕಾರಣಕ್ಕೆ ಈ ಮದುಮಗಳೀಗ ಭಾರಿ ಸುದ್ದಿಯಾಗಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮದುಮಗಳ ವಿಡಿಯೋ ಒಬ್ಬರು ಶೇರ್‌ ಮಾಡಿದ್ದು, ಅದೀಗ ಎಲ್ಲೆಡೆ ಹರಿದಾಡುತ್ತಿದೆ. ಅಂದಹಾಗೆ ಈ ಮದುಮಗಳ ಹೆಸರು ಅಕ್ಷಯಾ. ಅಭಿಷೇಕ್‌ ಎಂಬುವವರ ಜತೆ ಇವರು ಮದುವೆಯಾಗಿದ್ದಾಳೆ. ಈ ಲಾಕ್‌ಡೌನ್‌ನಲ್ಲಿ ಕರೊನಾ ನಿಯಮ ಪಾಲನೆ ಮಾಡಿ ಮದುವೆ ಮಾಡಬೇಕಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಾದರೂ ಮಿಂಚೋಣ ಎಂದುಕೊಂಡು ಇಂಥದ್ದೊಂದು ವಿಶೇಷ ರೀತಿಯ ಅಲಂಕಾರ ಮಾಡಿಕೊಳ್ಳಲಾಗಿದೆ. ಅವರ ಕನಸು ನನಸಾಗಿದ್ದು, ಎಲ್ಲೆಡೆ ಮದುಮಗಳು ಸುದ್ದಿ ಮಾಡುತ್ತಿದ್ದಾಳೆ.

ಇಲ್ಲಿದೆ ನೋಡಿ ವಿಡಿಯೋ: