ನ್ಯೂಸ್

ಆನ್‌ಲೈನ್‌ ಕ್ಲಾಸ್‌ನಲ್ಲೇ ವಿದ್ಯಾರ್ಥಿಗೆ ಬಂತು ‘ಮೂಡ್‌’! ಬಟ್ಟೆ ಹಾಕಿಕೊಳ್ಳುವಷ್ಟರಲ್ಲಿ ನಡೆದೇ ಹೋಯ್ತು ಎಡವಟ್ಟು!

suchetana

ವಿಯೆಟ್ನಾಂ: ಆನ್‌ಲೈನ್‌ ತರಗತಿಗಳು ಹಾಗೂ ಆನ್‌ಲೈನ್‌ ಮೀಟಿಂಗ್‌ಗಳು ತಂದಿರುವ ಅನಾಹುತಗಳು ಒಂದೆರಡಲ್ಲ. ಕ್ಯಾಮೆರಾ ಆಫ್‌ ಮಾಡುವುದನ್ನು ಮರೆತೋ, ಇಲ್ಲವೇ ಕ್ಯಾಮೆರಾ ಆನ್‌ ಇರುವುದು ತಿಳಿಯದೆಯೋ ಮಾಡಿದ ಚಟುವಟಿಕೆಗಳು ಒಂದೆರಡಲ್ಲ.

ಅಂಥದ್ದೇ ಇನ್ನೊಂದು ಘಟನೆ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಿಂದ ವರದಿಯಾಗಿದೆ. ವಿಯೆಟ್ನಾಂ ವಿಶ್ವವಿದ್ಯಾಲಯದ ಆನ್‌ಲೈನ್‌ ಕ್ಲಾಸ್‌ಗಳು ನಡೆಯುತ್ತಿದ್ದವು. ಕ್ಲಾಸ್‌ ಇನ್ನೂ ಮುಗಿದಿರಲಿಲ್ಲ. ನಡುವೆ ಇದ್ದ ವಿಶ್ರಾಂತಿಯ ಅವಧಿಯಲ್ಲಿ ಕಂಪ್ಯೂಟರ್‌ನ ಕ್ಯಾಮೆರಾ ಆಫ್‌ ಮಾಡುವುದನ್ನು ವಿದ್ಯಾರ್ಥಿ ಮರೆತಿದ್ದಾನೆ. ಅಲ್ಲೇ ಇದ್ದ ತನ್ನ ಪ್ರೇಯಸಿಯ ಜತೆಗೆ ಸೆಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾನೆ.

ಇದನ್ನು ಆತನ ಉಪನ್ಯಾಸಕರು ಹಾಗೂ ಸಹಪಾಠಿಗಳು ಗಮನಿಸಿದ್ದಾರೆ. ಕೂಡಲೇ ಆತನಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದಾರೆ. ನಂತರ ಲಗುಬಗೆಯಿಂದ ಕ್ಯಾಮೆರಾ ಆಫ್‌ ಮಾಡಿದ್ದಾನೆ. ನಂತರ ಬಟ್ಟೆ ಧರಿಸಿ ಬಂದು ಎಲ್ಲರ ಕ್ಷಮೆಯಾಚಿಸಿದ್ದಾನೆ.

ಆದರೆ ಈ ಕಾಮದಾಟದ ವಿಡಿಯೋ ಅದಾಗಲೇ ಜಾಲತಾಣದಲ್ಲಿ ಸೋರಿಕೆಯಾಗಿಹೋಗಿದೆ. ಅನೇಕ ಮಂದಿ ಇದನ್ನು ಶೇರ್‌ ಮಾಡಿಕೊಂಡಿರುವ ಕಾರಣ, ಸಾಕಷ್ಟು ವೈರಲ್‌ ಆಗಿಬಿಟ್ಟಿದೆ!