ನ್ಯೂಸ್

ಶಾಂತಿಗಾಗಿ ಪತ್ನಿ ರೇವತಿ ಜತೆ ನಿಖಿಲ್‌ ಧ್ಯಾನ- ಫೋಟೋ ವೈರಲ್

ಬೆಂಗಳೂರು: ರಾಜಕಾರಣ, ಸಿನಿಮಾ ಎರಡರಲ್ಲಿಯೂ ಸದ್ಯದ ಮಟ್ಟಿಗೆ ಅಷ್ಟೊಂದು ಬಿಜಿ ಆಗಿರದ ನಟ, ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಿಜಿಯಾಗಿದ್ದಾರೆ.

ರಾಜಕಾರಣ, ಸಿನಿಮಾ ಜತೆಗೆ ಫಿಟ್‌ನೆಸ್‌ನಲ್ಲಿಯೂ ಗಮನ ಕೊಡುವುದು ಅತ್ಯಂತ ಅವಶ್ಯಕ, ಅದರಲ್ಲಿಯೂ ಕರೊನಾ ಸೋಂಕಿನ ಈ ಸಂದರ್ಭದಲ್ಲಿ ಫಿಟ್‌ನೆಟ್‌ ಅತಿಮುಖ್ಯ ಎಂದುಕೊಂಡಿರುವ ನಿಖಿಲ್‌ ಅವರು, ತಮ್ಮ ಪತ್ನಿ ರೇವತಿ ಜತೆಗೆ ಧ್ಯಾನಕ್ಕೆ ಕುಳಿತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸಿನಿಮಾ ಹಾಗೂ ರಾಜಕಾರಣ ಕೈಹಿಡಿಯತ್ತೋ, ಬಿಡತ್ತೋ ಗೊತ್ತಿಲ್ಲ. ಆದರೆ ಫಿಟ್‌ನೆಸ್‌ ಅಂತೂ ಸದಾ ಅವಶ್ಯಕ ಎಂದು ನಿಖಿಲ್‌ ಅವರು ಅರಿತಂತಿದೆ. ಇದೇ ಕಾರಣದಿಂದ ಅವರು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಪ್ರತಿನಿತ್ಯ ಪ್ರಯತ್ನ ಪಡುತ್ತಿದ್ದಾರೆ.

ಇವರ ಜತೆಗೆ ರೇವತಿಯವರು ಕೂಡ ಗಂಡನಿಗೆ ಸಾಥ್‌ ನೀಡಿದ್ದು, ಅವರೂ ಧ್ಯಾನದಲ್ಲಿ ಕುಳಿತಿರುವ ಫೋಟೋ ಇದೀಗ ಸಖತ್‌ ವೈರಲ್‌ ಆಗಿದೆ.

ಈ ಹಿಂದೆ ನಿಖಿಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಒಟ್ಟಾಗಿ ನಿಖಿಲ್ ಮತ್ತು ರೇವತಿ ವರ್ಕೌಟ್ ಮಾಡುತ್ತಿದ್ದುದು ಕಂಡುಬಂದಿತ್ತು. ಇದೀಗ ಧ್ಯಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

'ಆಂತರಿಕ ಶಾಂತಿಗೆ ಧ್ಯಾನ ಕೀ ಇದ್ದಂತೆ' ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.

ಶಿರಾದ ಶಾಸಕರಾಗಿದ್ದ ಬಿ ಸತ್ಯನಾರಾಯಣ ಇತ್ತೀಚೆಗೆ ನಿಧನರಾಗಿದ್ದು, ಈ ಸ್ಥಾನಕ್ಕೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯನ್ನು ತಳ್ಳಿ ಹಾಕಿರುವ ನಿಖಿಲ್, ಈ ರೀತಿ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಅಥವಾ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.