ನ್ಯೂಸ್

ಮಂ‍‍ಟಪದಲ್ಲೇ ಮದುಮಗಳ ಮೇಲೆ ಕೈಹಾಕಿದ ವರ- ತಗೀ ಕೈ ಎಂದ ಪುರೋಹಿತರು: ವಿಡಿಯೋ ವೈರಲ್‌

ಮದುವೆ ಮಂಟಪದಲ್ಲಿಯೇ ಸಲುಗೆಯಿಂದ ಮದುಮಗಳ ಮೇಲೆ ಕೈಹಾಕಿದ ವರನನ್ನು ಪುರೋಹಿತರು ಗದರಿರುವ ವಿಡಿಯೋ ಒಂದು ಇದೀಗ ಸಕತ್‌ ವೈರಲ್‌ ಆಗಿದೆ.

ಮೊದಲೇ ಪರಿಚಯವಿದ್ದ ವಧು-ವರರಿಗೆ ಇದೇನೂ ಹೊಸತಲ್ಲವಾಗಿತ್ತೋ ಏನೊ. ಒಟ್ಟಿನಲ್ಲಿ ಎಲ್ಲರ ಎದುರೇ ಮದುವೆಯ ಮಂಟಪದಲ್ಲಿ ವಧುವಿನ ಹೆಗಲ ಮೇಲೆ ವರ ಕೈಹಾಕಿದ್ದಾನೆ. ವಧುವಿಗೂ ಇದೇನು ವಿಶೇಷ ಎನ್ನಿಸಲಿಲ್ಲ. ಆಕೆ ಕೂಡ ಯಾವುದೇ ರಿಯಾಕ್ಷನ್‌ ತೋರದೇ ಆರಾಮಾಗಿಯೇ ಇದ್ದಳು.

ಆದರೆ ಇತ್ತು ಮಂತ್ರ ಹೇಳುತ್ತಿದ್ದ ಪುರೋಹಿತರಿಗೆ ಅದ್ಯಾಕೋ ಸರಿಕಾಣಿಸಲಿಲ್ಲ. ತಗೀ ಕೈ ಎಂದಿದ್ದಾರೆ. ಗಲಿಬಿಲಿಗೊಂಡ ವರ ಕೂಡಲೇ ಕೈತೆಗೆದಾಗ ಸುತ್ತಲೂ ನೆರೆದಿದ್ದರೂ ದೊಡ್ಡದಾಗಿ ನಕ್ಕಿದ್ದಾರೆ. ಆಗ ವಧುವು ಕೂಡ ನಾಚಿದ್ದಾಳೆ. ಇದರ ವಿಡಿಯೋಗೆ ಇದಾಗಲೇ ಸಹಸ್ರಾರು ಕಮೆಂಟ್‌ ಬಂದಿದ್ದು, ನೋಡುಗರಿಗೆ ಒಂದು ರೀತಿಯ ತಮಾಷೆ ಎನ್ನಿಸುವಂತಿದೆ.

ನೀವೂ ನೋಡಿ ಈ ವಿಡಿಯೋ: