ಉತ್ತರ: ನೀವು ಕೂಡಲೇ ವಕೀಲರನ್ನು ಭೇಟಿ ಮಾಡಿ ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಕಚೇರಿಗೆ ಮತ್ತು ಎಲ್ಐಸಿಗೆ ನಿಮ್ಮ ಭಾಗದ ಬಗ್ಗೆ ಒಂದು ನೋಟಿಸ್ ಕೊಡಿಸಿ. ಆ ನಂತರ ನಿಮ್ಮ ಅತ್ತೆಯನ್ನೂ ಮತ್ತು ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳನ್ನು (ಕಾನೂನಿನಂತೆ) ಮತ್ತು ಎಲ್ಐಸಿಯನ್ನು ಪಾರ್ಟಿ ಮಾಡಿ ದಾವೆ ಹಾಕಿ. ನಿಮ್ಮ ಪತಿಯ ಹೆಸರಿನಲ್ಲಿ ಬೇರೆ ಆಸ್ತಿಗಳು ಇದ್ದರೆ ಅವನ್ನೂ ಸೇರಿಸಬಹುದು. ಇಂತಹ ದಾವೆಗೆ ಹೆಚ್ಚು ಖರ್ಚು ಆಗುವುದಿಲ್ಲ.
ನಿಮ್ಮ ಅತ್ತೆಗೆ ಹಣ ವಿತರಣೆ ಮಾಡದಂತೆ ತಡೆ ಪಡೆಯಬಹುದು. ನಾಮಿನಿ ಯಾರೇ ಆಗಿದ್ದರೂ ನಿಮ್ಮ ಪತಿಯ ಎಲ್ಲ ಚರ ಮತ್ತು ಸ್ಥಿತ ಆಸ್ತಿಗಳಲ್ಲಿಯೂ ನಿಮಗೂ, ನಿಮ್ಮ ಮಗಳಿಗೂ ಮತ್ತು ನಿಮ್ಮ ಪತಿಯ ತಾಯಿಗೂ ತಲಾ ಮೂರನೇ ಒಂದು ಭಾಗದ ಹಕ್ಕು ಇದ್ದೇ ಇರುತ್ತದೆ. ನಾಮಿನೇಷನ್ ಮಾಡಿದ ಮಾತ್ರಕ್ಕೆ ವಾರಸುದಾರರ ಹಕ್ಕು ಕುಂಠಿತವಾಗುವುದಿಲ್ಲ. ಪಿಂಚಣಿ ಇತ್ಯಾದಿಗಳೂ ಸಂಬಂಧಪಟ್ಟ ಕಾನೂನಿನಂತೆ ಹಂಚಿಕೆ ಆಗುತ್ತದೆ. ನೀವು ಹೆದರಬೇಕಾಗಿಲ್ಲ. ನಿಮ್ಮ ಹತ್ತಿರದ ಕೋರ್ಟ್ನಲ್ಲಿರುವ ಉಚಿತ ಕಾನೂನು ಸೇವಾ ಕೇಂದ್ರ ಸಂಪರ್ಕಿಸಿ. ನಯಾಪೈಸೆ ಖರ್ಚು ಇಲ್ಲದೇ ಕಾನೂನು ಸಹಾಯ ಮಾಡಿಕೊಡುತ್ತಾರೆ. ವಕೀಲರ ಖರ್ಚನ್ನೂ ಅವರೇ ನೋಡಿಕೊಳ್ಳುತ್ತಾರೆ.