More

    ‘ಕಠಿಣ ಕ್ರಮದ ಸರ್ಕಾರ’ ಅಂತ ಟೀಕಿಸ್ತಿದ್ದಾರಲ್ಲಾ? ಸರ್ಕಾರಕ್ಕೆ ಎಷ್ಟು ಅಂಕ ಕೊಡ್ತೀರಿ? ಪಿಎಫ್​ಐ ಬ್ಯಾನ್ ಏಕಿಲ್ಲ? ಸಿಎಂ ಉತ್ತರ ಕೇಳಿ…

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪತ್ರಿಕಾಗೋಷ್ಠಿ ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಹೇಳಿಕೊಂಡಿದ್ದಾರೆ.

    ಬಿಜೆಪಿ ಕಾರ್ಯಕರ್ತ ಪ್ರವೀಣ್​ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶವನ್ನು ರದ್ದು ಮಾಡಿರುವ ಸಿಎಂ, ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಸಾಧನೆಗಳ ಕುರಿತು ವಿವರಣೆ ನೀಡಿದ್ದಾರೆ. ಇದೇ ವೇಳೆ ಪತ್ರಕರ್ತರು ಕೇಳಿರುವ ಕೆಲವು ಪ್ರಶ್ನೆಗಳಿಗೆ ಹೀಗೆ ಉತ್ತರಿಸಿದ್ದಾರೆ.

    * ಕಠಿಣ ಕ್ರಮದ ಸರ್ಕಾರ ಎಂದು ಜನ ಟೀಕಿಸುತ್ತಿದ್ದಾರೆ, ಏನಿಸುತ್ತದೆ?
    ನಾವು ಬಾಯಿ‌ಮಾತಲ್ಲಿ ಹೇಳಲ್ಲ, ಮಾಡಿ ತೋರಿಸಿದ್ದೇವೆ. ಶಿವಮೊಗ್ಗದಲ್ಲಿ, ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇವೆ.

    *ಉತ್ತರ ಪ್ರದೇಶದ ಮಾಡೆಲ್ ಇಲ್ಲೂ ಆಗಬೇಕು ಎಂಬ ಕೂಗು ಇದೆ, ನಿಮಗೂ ಅನಿಸಿದೆಯೇ?
    ಉ. ಪ್ರದೇಶದಲ್ಲಿ ಅಲ್ಲಿನ ಸ್ಥಿತಿಗೆ ಸಿಎಂ ಯೋಗಿ  ಆದಿತ್ಯನಾಥ ಸರಿ ಇದ್ದಾರೆ. ಪ್ರಸಂಗ ಎದುರಾದರೆ ಅದೇ ಮಾಡೆಲ್ ಇಲ್ಲೂ ಬರುತ್ತದೆ.

    *ಹಿಂದುಗಳ ರಕ್ಷಣೆಗೆ ಸರ್ಕಾರಕ್ಕೆ ಬದ್ಧತೆ ಎಂದು ಚುನಾವಣೆಗೆ ಮೊದಲು ಹೇಳಿದ್ದೀರಿ? ಪಿಎಫ್​ಐ ಬ್ಯಾನ್ ಏಕಿಲ್ಲ?
    ಬ್ಯಾನ್ ಮಾಡುವುದು ಕೇಂದ್ರ. ರಾಜ್ಯದಿಂದ ವರದಿ ಕಳಿಸಿದ್ದೇವೆ. ಇಡೀ ದೇಶದಲ್ಲಿ ಒಂದು ತೀರ್ಮಾನ ಆಗುತ್ತದೆ. ಯಾವ ಯಾವ ವರದಿ ಕಳಿಸಬೇಕೋ ಕೊಟ್ಟಿದ್ದೇವೆ. ಆ ಪ್ರಕ್ರಿಯೆ ಪ್ರಾರಂಭ ಆಗಿದೆ. ಆದಷ್ಟು ಬೇಗ ಕೇಂದ್ರದಿಂದ ತೀರ್ಮಾನ ಹೊರಬರುತ್ತದೆ.

    *ನಿಮ್ಮ ಸರ್ಕಾರಕ್ಕೆ ನೀವು ಎಷ್ಟು ಅಂಕ ಎಷ್ಟುಕೊಡುತ್ತೀರಿ?
    ಜನ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ.

    *ನಲವತ್ತು ಪರ್ಸೆಂಟ್ ಸರ್ಕಾರದ ಆರೋಪ ಬಂದಿತ್ತು, ಈಗ ಏನಾಗಿದೆ?
    ಯಾರು ಯಾರೊಬ್ಬರಿಗೆ ನಲವತ್ತು ಪರ್ಸೆಂಟ್ ಕೊಟ್ಟಿದ್ದಾರೆ. ಅದು ಕಾಂಗ್ರೆಸ್ ಪ್ರೇರಿತ ಆರೋಪ.

    *ಮಲೆನಾಡು, ಕರಾವಳಿ ಕೊಲೆಯಾಗಲು ನಿಮ್ಮ ನಾಯಕರು ಕೊಡುವ ಹೇಳಿಕೆ ಕಾರಣವಲ್ಲವೇ?
    ಯಾರೂ ಪ್ರಚೋದನೆ ಹೇಳಿಕೆ ಕೊಟ್ಟಿಲ್ಲ.

    *ನಾವು ಭಾಗ್ಯ ಕೊಟ್ಟೆವು ಬಿಜೆಪಿಯವರು ಒಂದಾದರೂ ಯೋಜನೆ ಹೇಳಲಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ, ಏನಂತೀರಿ?
    ಅವರು ಭಾಗ್ಯ ಒಂದೂ ಜನರಿಗೆ ತಲುಪಲಿಲ್ಲ, ತಲುಪಿದ್ದು ದೌರ್ಭಾಗ್ಯ. ಅವರ ಯೋಜನೆ ಜನರಿಗೆ ತಲುಪಿದ್ದರೆ 120 ಸ್ಥಾನದಿಂದ ಎಪ್ಪತ್ತು ಸ್ಥಾನಕ್ಕೆ ಏಕೆ ಬರುತ್ತಿದ್ದರು.

    *ಸಂಪುಟ ಸೇರುವ ಆಕಾಂಕ್ಷಿಗಳಿಗೆ ನೀವು ಸಿಹಿ ಸುದ್ದಿ ಕೊಡುತ್ತೀರಾ?
    ನಡ್ಡಾ ಅವರು ಬಂದಿದ್ದರೆ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೆ, ಮುಂದಿನ ಭೇಟಿ ವೇಳೆ ಚರ್ಚೆಮಾಡುತ್ತೇನೆ.

    VIDEO: ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ: ಸಾಧನೆಯ ಹಾದಿ ವಿವರಿಸಿದ ಸಿಎಂ ಬೊಮ್ಮಾಯಿ…

    ಪ್ರತಿ ಜಿಲ್ಲೆಗೂ ಉಸ್ತುವಾರಿ ಕಾರ್ಯದರ್ಶಿ ನೇಮಿಸಿದ ಸರ್ಕಾರ: ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts