ನ್ಯೂಸ್

ಪದವೀಧರರಿಗೆ ಗುಡ್‌ ನ್ಯೂಸ್‌: ಐಡಿಬಿಐ ಬ್ಯಾಂಕ್‌ನಿಂದ 920 ಹುದ್ದೆಗಳಿಗೆ ಅರ್ಜಿ ಆಹ್ವಾನ

suchetana

ನವದೆಹಲಿ: ಐಡಿಬಿಐ ಬ್ಯಾಂಕ್ 920 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪದವೀಧರರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಬ್ಯಾಂಕ್‌ನ ವಿವಿಧ ಶಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಕಾರ್ಯನಿರ್ವಾಹಕ ಹುದ್ದೆಗಳು ಇವಾಗಿವೆ.

ಇದು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಕರೆದಿರುವ ಹುದ್ದೆ ಆಗಿದ್ದು, ಖಾಲಿ ಹುದ್ದೆಗಳ ಲಭ್ಯತೆಯ ಆಧಾರದ ಮೇಲೆ ಎರಡು ವರ್ಷಗಳ ವಿಸ್ತರಣೆಯ ಸಾಧ್ಯತೆ ಇರುವುದಾಗಿ ಬ್ಯಾಂಕ್‌ ಹೇಳಿದೆ.

ಪರೀಕ್ಷೆ ಹಾಗೂ ಇತರ ವಿವರ ಇಲ್ಲಿದೆ:

ಆನ್‌ಲೈನ್‌ನಲ್ಲಿ ಇದೇ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 18 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳು- 920

ವಯೋಮಿತಿ- 20 ರಿಂದ 25 ವರ್ಷ

ಶೈಕ್ಷಣಿಕ ಅರ್ಹತೆ- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಾಮಾನ್ಯಕ್ಕೆ ಕನಿಷ್ಠ 55 ಪ್ರತಿಶತ ಮತ್ತು ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ವರ್ಗಗಳಿಗೆ 50 ಪ್ರತಿಶತದೊಂದಿಗೆ ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ: ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ಪಾವತಿಸಬೇಕು, ಇತರ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1000 ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿವರ:

Step 1: http://idbibank.in ವೆಬ್‌ಸೈಟ್‌ಗೆ ಲಾಗಿನ್‌ ಆಗಿ.

Step 2: ‘Careers’ ಲಿಂಕ್ ಮೇಲೆ ಕ್ಲಿಕ್‌ ಮಾಡಿ

Step 3: ‘Current Opening’ link ಮೇಲೆ ಕ್ಲಿಕ್ಕಿಸಿ

Step 4: ‘Recruitment Notification for Executive on Contract – 2021-22 ಕ್ಲಿಕ್ಕಿಸಿ

Step 5: ಇಲ್ಲಿ ಸಂಪೂರ್ಣ ವಿವರ ಭರ್ತಿ ಮಾಡಿ

Step 6: ಶುಲ್ಕವನ್ನು ಪಾವತಿಸಿ, ಅರ್ಜಿಯ ಒಂದು ಕಾಪಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.