ನ್ಯೂಸ್

ಕುತೂಹಲತ್ತ ಹೈದರಾಬಾದ್​ ಚುನಾವಣೆ ರಿಸಲ್ಟ್​: ಯಾರ್ಯಾರಿಗೆ ಎಷ್ಟೆಷ್ಟು? ಇಲ್ಲಿದೆ ವಿವರ...

suchetana

ಹೈದರಾಬಾದ್: ಭಾರೀ ಕುತೂಹಲ ಮೂಡಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಕುತೂಹಲದ ಘಟ್ಟ ತಲುಪಿದ್ದು, ಮುನ್ನಡೆಯಲ್ಲಿದ್ದ ಬಿಜೆಪಿಯನ್ನು ಮೀರಿಸಿ ಟಿಆರ್​ಎಸ್​ ಮುನ್ನಡೆ ಸಾಧಿಸಿದೆ.

ಇದಾಗಲೇ 11 ಕ್ಷೇತ್ರಗಳಲ್ಲಿ ಗೆದ್ದಿರುವ ಟಿಆರ್​ಎಸ್​  57 ವಾರ್ಡ್​ಗಳಲ್ಲಿ ಮುನ್ನಡೆಯಲ್ಲಿದ್ದರೆ, ಎಂಐಎಂಐಎಂ 10 ಕಡೆ ಗೆದ್ದಿದ್ದು 33 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಒಂದು ಕಡೆ ಗೆದ್ದಿದ್ದು 36 ವಾರ್ಡ್​ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್​ ಒಂದು ಕಡೆ ಗೆಲುವು ಸಾಧಿಸಿದ್ದು, ಇನ್ನೊಂದು ವಾರ್ಡ್​ನಲ್ಲಿ ಮುನ್ನಡೆಯಲ್ಲಿದೆ.

ಒಟ್ಟು 74 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಿಎಚ್​ಎಂಸಿ 150 ವಾರ್ಡ್​ಗಳನ್ನು ಹೊಂದಿದ್ದು, 1,122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರೊನಾ ವೈರಸ್​ ಕಾರಣದಿಂದ ಮತಪತ್ರ ಬಳಸಿ ಚುನಾವಣೆ ನಡೆಸಲಾಗಿದೆ.

ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. 8,152 ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಕರೊನಾ ವೈರಸ್​ ಕಾರಣದಿಂದ ಮತಪತ್ರ ಬಳಸಿ ಚುನಾವಣೆ ನಡೆಸಲಾಗಿದೆ.

ಇನ್ನು ಟಿಆರ್‌ಎಸ್ ಮುನ್ನಡೆ ಸಾಧಿಸುತ್ತಿದ್ದಂತೇ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಹಾಗೂ ಟಿಆರ್‌ಎಸ್ ನಾಯಕಿ ಕೆ. ಕವಿತಾ, ಮುಂದಿನ 2-3ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಹೊರಹೊಮ್ಮಲಿದೆ. ಟಿಆರ್‌ಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಜನರನ್ನು ವಿಭಜಿಸಲು ಬಂದಿದ್ದ ಬಿಜೆಪಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಅವರು ಹೇಳಿದ್ದಾರೆ.