ನ್ಯೂಸ್

ಹಾಥರಸ್​ನಲ್ಲಿ ಇನ್ನೊಂದು ಭಯಾನಕ ಘಟನೆ- ನಾಲ್ಕು ವರ್ಷದ ಕಂದನ ಮೇಲೆ ಅತ್ಯಾಚಾರ!

suchetana

ಲಖನೌ: ಹಾಥರಸ್​ನಲ್ಲಿ 19 ವರ್ಷದ ಯುವತಿಯ ಗ್ಯಾಂಗ್‍ರೇಪ್ ನಡೆದಿದೆ ಎನ್ನಲಾದ ಪ್ರಕರಣದ ಬಿಸಿ ತಣ್ಣಗಾಗುವ ಮೊದಲೇ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಾಥರಸ್​ನ ಸಸ್ನಿ ಎಂಬಲ್ಲಿ ಈ ಘಟನೆ ನಡೆದಿದೆ. ಈ ಮಗುವಿನ ಸಂಬಂಧಿಯೇ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಸದ್ಯ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಆಫಿಸರ್ ರುಚಿ ಗುಪ್ತಾ ತಿಳಿಸಿದ್ದಾರೆ.

ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ರುಚಿ ಗುಪ್ತಾ ಕೂಡ ಸ್ಥಳಕ್ಕೆ ತಲುಪಿದ್ದಾರೆ. ಅವರು ಕುಟುಂಬ ಮತ್ತು ಗ್ರಾಮಸ್ಥರಿಂದ ವಿಚಾರಿಸಿ ಸಂಗತಿಗಳನ್ನು ಸಂಗ್ರಹಿಸಿದ್ದಾರೆ. ಇದರ ಆಧಾರದ ಮೇಲೆ ಬಾಲಕಿಯ ಸಂಬಂಧಿಕನನ್ನು ಬಂಧಿಸಲಾಗಿದೆ.

ಅತ್ಯಾಚಾರದ ವಿಷಯ ತಿಳಿಯುತ್ತಲೇ ಸಾರ್ವಜನಿಕರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.